ಶಿವಮೊಗ್ಗ ಜನಶತಾಬ್ದಿ 3 ದಿನ ಭಾಗಶಃ ರದ್ದು, ಒಂದು ರೈಲಿನ ಮಾರ್ಗ ಬದಲಾವಣೆ, ಯಾಕೆ? ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗ: ಬೆಂಗಳೂರು ನಿಲ್ದಾಣದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ತಾಳಗುಪ್ಪ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸೇವೆಯಲ್ಲಿ ಆಗಸ್ಟ್ 1ರಿಂದ 4ರವರೆಗೆ ವ್ಯತ್ಯಯ ಉಂಟಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಜನಶತಾಬ್ದಿ ರೈಲು ಭಾಗಶಃ ರದ್ದು

  • ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ (ರೈಲು ಸಂಖ್ಯೆ 12090) ಹಾಗೂ ಬೆಂಗಳೂರು – ಶಿವಮೊಗ್ಗ ಜನಶತಾಬ್ದಿ (ರೈಲು ಸಂಖ್ಯೆ 12089) ರೈಲುಗಳು ಆಗಸ್ಟ್ 1ರಿಂದ ಆಗಸ್ಟ್ 3ರವರೆಗೆ ಮೂರು ದಿನಗಳ ಕಾಲ ಅರಸೀಕೆರೆವರೆಗೆ ಮಾತ್ರ ಸಂಚರಿಸಲಿವೆ. ಅಂದರೆ ಈ ಅವಧಿಯಲ್ಲಿ ರೈಲುಗಳು ಅರಸೀಕೆರೆ ಮತ್ತು ಬೆಂಗಳೂರು ನಡುವೆ ಸಂಚರಿಸುವುದಿಲ್ಲ.

ಇಂಟರ್‌ಸಿಟಿ ರೈಲು ಭಾಗಶಃ ರದ್ದು

  • ತಾಳಗುಪ್ಪ – ಬೆಂಗಳೂರು ಇಂಟರ್‌ಸಿಟಿ (ರೈಲು ಸಂಖ್ಯೆ 20652) ರೈಲು ಕೂಡ ಆಗಸ್ಟ್ 1ರಿಂದ ಆಗಸ್ಟ್ 3ರವರೆಗೆ ಅರಸೀಕೆರೆವರೆಗೆ ಮಾತ್ರ ಕಾರ್ಯನಿರ್ವಹಿಸಲಿದೆ.

ಒಂದು ದಿನ ಸಂಚಾರ ಸಂಪೂರ್ಣ ರದ್ದು

  • ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16581) ಹಾಗೂ ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16582) ರೈಲುಗಳ ಸಂಚಾರವನ್ನು ಆಗಸ್ಟ್ 4ರಂದು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.

ಬದಲಿ ಮಾರ್ಗದಲ್ಲಿ ಸಂಚಾರ

  • ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16228) ಹಾಗೂ ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16227) ರೈಲುಗಳು ಆಗಸ್ಟ್ 3ರಂದು ತುಮಕೂರು, ಯಶವಂತಪುರ ಮತ್ತು ಮಜೆಸ್ಟಿಕ್ ಮಾರ್ಗದ ಬದಲಾಗಿ ಅರಸೀಕೆರೆ, ಹಾಸನ ಹಾಗೂ ಕೃಷ್ಣರಾಜನಗರ ಮಾರ್ಗವಾಗಿ ಸಂಚರಿಸಲಿವೆ.
Prayanikare-Gamanisi-Indian-Railway-News