ಪತಿ, ಸಂಬಂಧಿಕರಿಗೆ ಮಹಿಳೆಯ ಫೋಟೊ ಕಳುಹಿಸಿದ ಯುವಕ, ಆರೋಪ ಸಾಬೀತಾದರೆ ವರ್ಷಗಟ್ಟಲೆ ಜೈಲು ನಿಶ್ಚಿತ

ಶಿವಮೊಗ್ಗ: ಮಹಿಳೆಯೊಬ್ಬರ (ಹೆಸರು, ಊರು ಗೌಪ್ಯ) ಖಾಸಗಿ ಫೋಟೋಗಳನ್ನು ಅವರ ಪತಿ ಹಾಗೂ ಸಂಬಂಧಿಕರ ಮೊಬೈಲ್‌ಗೆ ಕಳುಹಿಸಿ ಮಾನನಷ್ಟ ಮಾಡಿದ ಆರೋಪ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗದಿಂದ ಬೇರೆ ಜಿಲ್ಲೆಗೆ ತೆರಳುವಾಗ ಬಸ್ಸಿನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಆ ಸಂದರ್ಭ ಮಹಿಳೆಯ ಜೊತೆಗೆ ಫೋಟೊ ತೆಗೆಸಿಕೊಂಡಿದ್ದ. ಬಳಿಕ ಆಕೆಗೆ ಕರೆ ಮಾಡಿ ಪತಿಯೊಂದಿಗೆ ವಿಚ್ಛೇದನ ಪಡೆದು ತನ್ನೊಂದಿಗೆ ಬರುವಂತೆ ಪೀಡಿಸುತ್ತಿದ್ದ. ಇದಕ್ಕೆ ಒಪ್ಪದ ಹಿನ್ನೆಲೆ ಆಕೆಯ ಫೋಟೋಗಳನ್ನು ಪತಿ ಹಾಗೂ ಸಂಬಂಧಿಕರಿಗೆ ಕಳುಹಿಸಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Shimogga-Cyber-Crime-CEN-Police-Station

ಘಟನೆ ಸಂಬಂಧ ಶಿವಮೊಗ್ಗದ ಸೈಬರ್‌ ಕ್ರೈಮ್‌ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಐಟಿ ಕಾಯ್ದೆ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಾಗಿದೆ. ಈ ಸೆಕ್ಷನ್‌, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಅಸಭ್ಯ ಅಥವಾ ಖಾಸಗಿತನಕ್ಕೆ ಭಂಗ ತರುವ ವಿಷಯಗಳನ್ನು ಪ್ರಸಾರ ಮಾಡಿದರೆ 3 ವರ್ಷ ಜೈಲು ಹಾಗೂ ₹5 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ. ವರ್ತನೆ ಮುಂದುವರೆದರೆ ಶಿಕ್ಷೆ ಮತ್ತು ದಂಡದ ಪ್ರಮಾಣ ಹೆಚ್ಚಳವಾಗಲಿದೆ. ಇನ್ನು, ಬಿಎನ್‌ಎಸ್ ಸೆಕ್ಷನ್ 77ರ ಪ್ರಕಾರಮಹಿಳೆಯರ ಖಾಸಗಿ ಚಿತ್ರಗಳನ್ನು ಅವರ ಅನುಮತಿಯಿಲ್ಲದೆ ಸೆರೆಹಿಡಿಯುವುದು ಅಥವಾ ಹಂಚಿಕೊಂಡರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಪ್ರಕರಣ ಮರುಕಳಿಸಿದರೆ ಶಿಕ್ಷೆ ಪ್ರಮಾಣ ಹೆಚ್ಚಳವಾಗಲಿದೆ.