ಶಿವಮೊಗ್ಗದಲ್ಲಿ ಮಾನ್ಸೂನ್‌ ಮಾರಾಟ ಮೇಳ, ದೊರೆಯಲಿದೆ ರೇಷ್ಮೆ, ಬನಾರಸ್‌ ಸೀರೆ, ಎಲ್ಲಿ? ಯಾವಾಗ?

ಶಿವಮೊಗ್ಗ: ನಗರದ ಪಂಪನಗರ 2ನೇ ತಿರುವಿನ ಗುತ್ತ್ಯಪ್ಪ ಕಾಲೋನಿಯಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಆಗಸ್ಟ್ 5ರಂದು ಮಾನ್ಸೂನ್ ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಮೇಳದಲ್ಲಿ ಕಾಂಚಿಪುರಂನಿಂದ ನೇರವಾಗಿ ರೇಷ್ಮೆ ಸೀರೆಗಳು, ಕಾಶಿಯಿಂದ ಬನಾರಸ್ ಸೀರೆಗಳು, ಫ್ಯಾನ್ಸಿ ಸೀರೆಗಳು, ಡ್ರೆಸ್‌ಗಳು, ಬೆಡ್‌ಲೈನರ್‌ಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಅಲಂಕಾರಿಕ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.

SHIMOGA-NEWS-GRAPHICS-BY-SHIVAMOGGA-LIVE

ತಿಂಡಿ, ತಿನಿಸು ಸ್ಟಾಲ್‌

ಜೊತೆಗೆ, ಮನೆಯಲ್ಲಿ ತಯಾರಿಸಿದ ರುಚಿಕರ ಸಸ್ಯಾಹಾರಿ ಹಾಗೂ ಮಾಂಸಾಹಾರಿ ತಿನಿಸುಗಳು ಹಾಗೂ ಮಲೆನಾಡಿನ ತಿಂಡಿ-ತಿನಿಸುಗಳ ಸ್ಟಾಲ್‌ಗಳು ಇಲ್ಲಿನ ವಿಶೇಷತೆಯಾಗಿರಲಿವೆ. ವಿವಿಧ ಜಿಲ್ಲೆಗಳಿಂದ ಆಗಮಿಸುವ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಆಹ್ವಾನಿಸಲಾಗಿದೆ. ಹಳೆಯ ಜರಿ ಸೀರೆಗಳನ್ನು ಉತ್ತಮ ಬೆಲೆಗೆ ಖರೀದಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಸುಮಿತ್ರಾ ಕೇಶವ್ ಮೂರ್ತಿ, ಕಾರ್ಯದರ್ಶಿ ನಳಿನಿ ಜಯರಾಮ್, ಖಜಾಂಜಿ ಸುಜಾತ ವೆಂಕಟೇಶ್ ಹಾಗೂ ಕಮಿಟಿ ಮತ್ತು ಸಂಘದ ಸದಸ್ಯೆಯರು ಉಪಸ್ಥಿತರಿರುವರು. ಹೆಚ್ಚಿನ ಮಾಹಿತಿಗಾಗಿ 9448912789, 9448792064 ಅಥವಾ 7019750556 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.