ಶಿವಮೊಗ್ಗ: ತಿಲಕನಗರ ಮುಖ್ಯ ರಸ್ತೆಯಲ್ಲಿರುವ ಮೆಡ್‌ಕೇರ್ ಹೆಲ್ತ್ ಸೆಂಟರ್ ಆಸ್ಪತ್ರೆಯ ಕ್ಯಾಶ್ ಕೌಂಟರ್ ಡ್ರಾ ತೆರೆದು ₹70,000 ನಗದು ಕಳವು ಮಾಡಲಾಗಿದೆ. ಈ ಸಂಬಂಧ ಒಂದು ವರ್ಷ ತಡವಾಗಿ ಪ್ರಕರಣ ದಾಖಲಾಗಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಆಸ್ಪತ್ರೆಯ ಮಾಲೀಕ ಅರುಣ್‌ಕುಮಾರ್ ನೀಡಿದ ದೂರು ನೀಡಿದ್ದಾರೆ. ಕಳೆದ ವರ್ಷದ ಮೇ 9ರ ರಾತ್ರಿ ಘಟನೆ ನಡೆದಿದೆ. ಆಸ್ಪತ್ರೆಯ ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದ ಅರುಣ್ ಕುಮಾರ್ ಅವರು ಆಪರೇಷನ್ ಥಿಯೇಟರ್‌ಗೆ ಹೋಗಿ ವಾಪಸ್ ಬರುವಷ್ಟರಲ್ಲಿ, ಕ್ಯಾಶ್ ಕೌಂಟರ್ ಡ್ರಾ ಅರ್ಧ ತೆರೆದುಕೊಂಡಿತ್ತು. ಅನುಮಾನಗೊಂಡು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ವ್ಯಕ್ತಿಯೊಬ್ಬ ಆಸ್ಪತ್ರೆಯೊಳಗೆ ಪ್ರವೇಶಿಸಿ ಕ್ಯಾಶ್ ಕೌಂಟರ್‌ನಲ್ಲಿದ್ದ ₹70,000 ನಗದು ಕಳವು ಮಾಡಿಕೊಂಡು ಪರಾರಿಯಾಗಿರುವುದು ಗೊತ್ತಾಗಿತ್ತು ಎಂದು ಆರೋಪಿಸಲಾಗಿದೆ.

ಅಕ್ಕಪಕ್ಕದಲ್ಲಿ ವಿಚಾರಿಸಿದರು ಕಳ್ಳನ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಬಳಿಕ ದೂರುದಾರರ ಕೆಲಸದ ಒತ್ತಡದಿಂದಾಗಿ ತಡವಾಗಿ ದೂರು ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.