ಶಿವಮೊಗ್ಗ – ತುಮಕೂರು ಹೈವೇ, ಸಂಸದ ರಾಘವೇಂದ್ರ ಪ್ರಶ್ನೆಗೆ ಮಿನಿಸ್ಟರ್‌ ಉತ್ತರ, ಯಾವಾಗ ಪೂರ್ಣವಾಗುತ್ತೆ?

ನವದೆಹಲಿ: ಶಿವಮೊಗ್ಗ – ತುಮಕೂರು ರಾಷ್ಟ್ರೀಯ ಹೆದ್ದಾರಿ 69ರ ನಾಲ್ಕು ಪಥಗಳ ವಿಸ್ತರಣೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ₹6,400 ಕೋಟಿ ಅಂದಾಜು ವೆಚ್ಚದ, 214.43 ಕಿ.ಮೀ ಉದ್ದದ ಈ ವಿಸ್ತರಣೆ ಕಾಮಗಾರಿ 2027ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದು ಸಂಸದ ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸಂಸದ ಬಿ.ವೈ.ರಾಘವೇಂದ್ರ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಉತ್ತರ ನೀಡಿದ್ದಾರೆ.

By-Raghavendra-about-Shimoga-tumkur-highway.

ನಾಲ್ಕು ಹಂತ, ಎಷ್ಟೆಷ್ಟು ಕಾಮಗಾರಿ ಪೂರ್ಣ?

  • ಯೋಜನೆಯ ನಾಲ್ಕು ಹಂತಗಳ ಪೈಕಿ ಮಲ್ಲಸಂದ್ರದಿಂದ ಕರಡಿವರೆಗಿನ 52.89 ಕಿ.ಮೀ ಮೊದಲ ಹಂತ ಶೇ.100ರಷ್ಟು ಪೂರ್ಣಗೊಂಡಿದೆ.
  • ಕರಡಿಯಿಂದ ಬಾಣಾವರ 56.70 ಕಿ.ಮೀ ಮತ್ತು ಬಾಣಾವರದಿಂದ ಬೆಟ್ಟದಹಳ್ಳಿ 48.51 ಕಿ.ಮೀ ಭಾಗದ ಕಾಮಗಾರಿಗಳು ಶೇ.98ಕ್ಕಿಂತ ಹೆಚ್ಚು ಮುಗಿದು ವಾಹನ ಸಂಚಾರಕ್ಕೆ ಮುಕ್ತವಾಗಿವೆ.
  • ಬೆಟ್ಟದಹಳ್ಳಿಯಿಂದ ಶಿವಮೊಗ್ಗದವರೆಗಿನ ಕೊನೆಯ ಹಂತದ 56.33 ಕಿ.ಮೀ ಕಾಮಗಾರಿಯೂ ಈಗಾಗಲೇ ಶೇ.83.78ರಷ್ಟು ಭೌತಿಕ ಪ್ರಗತಿ ಸಾಧಿಸಿದೆ ಎಂದು ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ, ಮನವಿ

ಇನ್ನು, ಯೋಜನೆಗೆ ಅಗತ್ಯವಿರುವ 1,271.41 ಹೆಕ್ಟೇರ್ ಭೂಮಿಯಲ್ಲಿ ಈಗಾಗಲೇ 1,268.33 ಹೆಕ್ಟೇರ್ ಭೂಸ್ವಾಧೀನ ಪೂರ್ಣಗೊಂಡು ಹಸ್ತಾಂತರಿಸಲಾಗಿದೆ. ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರ್ಕಾರದಿಂದ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಸ್ಥಳೀಯ ಆಡಳಿತವು ಸಕ್ರಿಯ ಬೆಂಬಲ ನೀಡಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಹೆದ್ದಾರಿ ಪೂರ್ಣಗೊಂಡ ಬಳಿಕ ಶಿವಮೊಗ್ಗ-ಬೆಂಗಳೂರು ನಡುವಿನ ಪ್ರಯಾಣದ ಸಮಯ ಗಣನೀಯವಾಗಿ ಕಡಿಮೆಯಾಗಿ, ವ್ಯಾಪಾರ, ಕೃಷಿ ಹಾಗೂ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ ಸಿಗಲಿದೆ ಎಂದು ರಾಘವೇಂದ್ರ ತಿಳಿಸಿದ್ದಾರೆ.