ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಪುಷ್ಯ ಮಳೆ ಅಬ್ಬರಿಸುತ್ತಿದೆ. ತೀರ್ಥಹಳ್ಳಿ, ಹೊಸನಗರ, ಸಾಗರ ಭಾಗದಲ್ಲಿ ಮಳೆ ಜೋರಾಗಿದೆ. ವಿವಿಧೆಡೆ ಮಳೆಯಿಂದ ಹಾನಿಯು ಉಂಟಾಗಿದೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಎಲ್ಲೆಲ್ಲಿ ಎಷ್ಟಿದೆ ಮಳೆ?
ಜುಲೈ 31ರ ಬೆಳಗ್ಗೆ 8.30ರಿಂದ ಆಗಸ್ಟ್ 1ರ ಬೆಳಗ್ಗೆ 8.30ರವೆರೆಗೆ ಜಿಲ್ಲೆಯಲ್ಲಿ ಸರಾಸರಿ 46.90 ಮಿ.ಮೀ ಮಳೆಯಾಗಿದೆ. ಈ ಅವಧಿಯಲ್ಲಿ ಶಿವಮೊಗ್ಗ ತಾಲೂಕಿನಲ್ಲಿ 12.10 ಮಿ.ಮೀ, ಭದ್ರಾವತಿ 9.60 ಮಿ.ಮೀ, ತೀರ್ಥಹಳ್ಳಿ 98 ಮಿ.ಮೀ, ಸಾಗರ 52.70 ಮಿ.ಮೀ, ಶಿಕಾರಿಪುರ 26.40 ಮಿ.ಮೀ, ಸೊರಬದಲ್ಲಿ 48.90 ಮಿ.ಮೀ, ಹೊಸನಗರ 80.60 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

ಆಗುಂಬೆಯಲ್ಲಿ ಭಾರೀ ಮಳೆ
ಕಳೆದ 24 ಗಂಟೆಯಲ್ಲಿ ತೀರ್ಥಹಳ್ಳಿ, ಹೊಸನಗರ, ಸಾಗರ ಮತ್ತು ಸೊರಬ ತಾಲ್ಲೂಕುಗಳ ವಿವಿಧ ಮಳೆಮಾಪನ ಕೇಂದ್ರಗಳಲ್ಲಿ ಭಾರೀ ಮಳೆ ದಾಖಲಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಅಗುಂಬೆಯಲ್ಲಿ ಗರಿಷ್ಠ 264.6 ಮಿ.ಮೀ ಹಾಗೂ ಅಗುಂಬೆ-1 ರಲ್ಲಿ 250.75 ಮಿ.ಮೀ ಮಳೆಯಾಗಿದೆ.
ಇನ್ನು ತೀರ್ಥಹಳ್ಳಿಯ ಹೊನ್ನೆತಾಳು (167.5 ಮಿ.ಮೀ), ಅರಳಸುರಳಿ (140 ಮಿ.ಮೀ), ಕುಡುಮಲ್ಲಿಗೆ (112.5 ಮಿ.ಮೀ), ಆರಗ (111.5 ಮಿ.ಮೀ), ನೆರಟೂರು (110 ಮಿ.ಮೀ), ಹದಿಗಲ್ಲು (98.5 ಮಿ.ಮೀ), ತೀರ್ಥಹಳ್ಳಿ (96.25 ಮಿ.ಮೀ), ಹೊಸಹಳ್ಳಿ (94 ಮಿ.ಮೀ), ಮಾಳೂರು (87.75 ಮಿ.ಮೀ), ಭಾಂಡ್ಯ-ಕುಕ್ಕೆ (83 ಮಿ.ಮೀ), ಬಸವಾನಿ (78 ಮಿ.ಮೀ), ಬೆಜ್ಜವಳ್ಳಿ (76 ಮಿ.ಮೀ), ಮೇಗರವಳ್ಳಿ (74.5 ಮಿ.ಮೀ), ಹರೋಗುಳಿಗೆ (69.5 ಮಿ.ಮೀ), ದೇವಂಗಿ (68 ಮಿ.ಮೀ), ಹೆದ್ದೂರು (67 ಮಿ.ಮೀ), ಮೇಲಿನಕುರುವಳ್ಳಿ (66.5 ಮಿ.ಮೀ), ಸಾಲ್ಗಡಿ (63 ಮಿ.ಮೀ), ಮೇಳಿಗೆ (61.5 ಮಿ.ಮೀ), ದೇಮ್ಲಾಪುರ (57.5 ಮಿ.ಮೀ), ತ್ರಿಯಂಬಕಪುರ ಹಾಗೂ ಹೆಗ್ಗೋಡು (ತಲಾ 54.5 ಮಿ.ಮೀ) ಮತ್ತು ಮಂಡಗದ್ದೆಯಲ್ಲಿ 50 ಮಿ.ಮೀ ಮಳೆ ದಾಖಲಾಗಿದೆ.
ಅದೇ ರೀತಿ, ಹೊಸನಗರ ತಾಲ್ಲೂಕಿನ ನಗರದಲ್ಲಿ 197 ಮಿ.ಮೀ, ಕರಿಮನೆ (156 ಮಿ.ಮೀ), ಅಂಡಗದೂದೂರು (141 ಮಿ.ಮೀ), ಖೈರಗುಂದ (111.25 ಮಿ.ಮೀ), ನಿಟ್ಟೂರು (110.25 ಮಿ.ಮೀ), ತ್ರಿಣಿವೆ (97 ಮಿ.ಮೀ), ಸುಳಗೋಡು (94 ಮಿ.ಮೀ), ಮೇಲಿನಬೆಸಿಗೆ (62 ಮಿ.ಮೀ) ಹಾಗೂ ಹುಂಚಾದಲ್ಲಿ 61.25 ಮಿ.ಮೀ ಮಳೆಯಾಗಿದೆ.
ಸಾಗರ ತಾಲ್ಲೂಕಿನ ಕೆಳದಿ (78 ಮಿ.ಮೀ), ಹಿರೇನೆಲ್ಲೂರು (71.5 ಮಿ.ಮೀ), ಕೋಳೂರು (68.5 ಮಿ.ಮೀ), ಮಾಲ್ವೆ (65.5 ಮಿ.ಮೀ), ಪಡವಗೋಡು (58 ಮಿ.ಮೀ), ಕಾನ್ಲೆ (89.5 ಮಿ.ಮೀ), ಮಸೂರು (88.5 ಮಿ.ಮೀ) ಹಾಗೂ ತ್ಯಾಗರ್ತಿಯಲ್ಲಿ 51 ಮಿ.ಮೀ ಮಳೆ ದಾಖಲಾಗಿದೆ. ಸೊರಬ ತಾಲ್ಲೂಕಿನ ಚಂದ್ರಗುತ್ತಿಯಲ್ಲಿ 100.75 ಮಿ.ಮೀ, ನ್ಯಾರ್ಸಿ (77.5 ಮಿ.ಮೀ), ಗುಡುವಿ (61.5 ಮಿ.ಮೀ), ದೂಗೂರು (56.75 ಮಿ.ಮೀ), ದ್ಯಾವನಹಳ್ಳಿ (55 ಮಿ.ಮೀ), ಸೊರಬ (52 ಮಿ.ಮೀ) ಹಾಗೂ ಜಡೆ ಪ್ರದೇಶದಲ್ಲಿ 50 ಮಿ.ಮೀ ಮಳೆ ದಾಖಲಾಗಿರುವುದು ವರದಿಯಾಗಿದೆ.