ಶಿವಮೊಗ್ಗದಲ್ಲಿ 2 ದಿನದಿಂದ ಮಳೆ ಅಬ್ಬರ, ಜುಲೈನಲ್ಲಿ ತೀವ್ರ ಕೊರತೆ, ಇಡೀ ತಿಂಗಳು ಎಷ್ಟಾಗಿದೆ ವರ್ಷಧಾರೆ?

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಕಳೆದ ಎರಡು ದಿನದಿಂದ ಮಳೆ ಅಬ್ಬರ ಜೋರಾಗಿದೆ. ಜಲಾಶಯಗಳ ಒಳ ಹರಿವು ಹೆಚ್ಚಳವಾಗಿದ್ದು, ನದಿಗಳಲ್ಲಿ ನೀರನ ಹರಿವು ಏರಿಕೆಯಾಗಿದೆ. ಆದರೆ ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಶೇ.43ರಷ್ಟು ಮಳೆ ಕೊರತೆಯಾಗಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಎರಡು ದಿನದಿಂದ ಮಳೆ ಜೋರು

ಕಳೆದ ಎರಡು ದಿನದಿಂದ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಗಾಲದ ಅನುಭವ ನೀಡುವಂತಹ ಮಳೆ ಸುರಿಯುತ್ತಿದೆ. ತೀರ್ಥಹಳ್ಳಿ, ಹೊಸನಗರ, ಸಾಗರ ಭಾಗದಲ್ಲಿ ಜೋರು ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಕೆರೆಕಟ್ಟೆಗಳಿಗೆ ನೀರು ಹರಿದು ಬರುತ್ತಿದೆ.

Rainfall-in-Shimoga-city.

ತಿಂಗಳ ಕೊನೆಗೆ ವರುಣನ ಆರ್ಭಟ

ರಾಜ್ಯದಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಉಂಟಾಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದರು. ಅಂತೆಯೇ ಶಿವಮೊಗ್ಗ ಜಿಲ್ಲೆಯಲ್ಲಿಯೂ ಮಳೆ ಪ್ರಮಾಣ ಕಡಿಮೆಯಾಗಿದೆ. ಜಿಲ್ಲಾಡಳಿತದ ವರದಿಯಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ ತಿಂಗಳ ವಾಡಿಕೆ ಮಳೆ 603.54 ಮಿ.ಮೀ. ಆದರೆ ಈ ಬಾರಿ ಜುಲೈ ತಿಂಗಳಲ್ಲಿ 450.96 ಮಿ.ಮೀ ಮಳೆಯಾಗಿದ್ದು, ಶೇ.43ರಷ್ಟು ಮಳೆ ಕೊರತೆಯಾಗಿದೆ. ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗಬೇಕಿದ್ದರೂ ಹಿನ್ನಡೆಯಾಗಿತ್ತು, ಆದರೆ ತಿಂಗಳ ಕೊನೆಯ ದಿನ ವರುಣ ಅಬ್ಬರಿಸಿದ್ದಾನೆ.

ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ಮಳೆ?

ಜುಲೈ ತಿಂಗಳಲ್ಲಿ ತೀರ್ಥಹಳ್ಳಿಯಲ್ಲಿ ಅತ್ಯಧಿಕ ಮಳೆಯಾಗಿದ್ದರೆ, ಭದ್ರಾವತಿಯಲ್ಲಿ ಕಡಿಮೆ ಮಳೆಯಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 922.20 ಮಿ.ಮೀ ಮಳೆಯಾಗಿದೆ (ವಾಡಿಕೆ ಮಳೆ 1017.90 ಮಿ.ಮೀ), ಹೊಸನಗರ ತಾಲೂಕಿನಲ್ಲಿ 813.20 ಮಿ.ಮೀ (ವಾಡಿಕೆ 1162.70 ಮಿ.ಮೀ), ಸಾಗರದಲ್ಲಿ 847.70 ಮಿ.ಮೀ (ವಾಡಿಕೆ 677.32 ಮಿ.ಮೀ), ಶಿವಮೊಗ್ಗದಲ್ಲಿ 132.80 ಮಿ.ಮೀ (ವಾಡಿಕೆ 204.70 ಮಿ.ಮೀ), ಭದ್ರಾವತಿಯಲ್ಲಿ 102.90 ಮಿ.ಮೀ (ವಾಡಿಕೆ 198.80 ಮಿ.ಮೀ), ಶಿಕಾರಿಪುರ ತಾಲೂಕಿನಲ್ಲಿ 168.70 ಮಿ.ಮೀ (ವಾಡಿಕೆ 257.70 ಮಿ.ಮೀ), ಸೊರಬ ತಾಲೂಕಿನಲ್ಲಿ 339.60 ಮಿ.ಮೀ (ವಾಡಿಕೆ 535.20 ಮಿ.ಮೀ) ಮಳೆಯಾಗಿದೆ.