ಜಲಾಶಯ ಮಾಹಿತಿ: ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದ್ದು ಜಲಾಶಯಗಳ ಒಳ ಹರಿವು ಪ್ರಮಾಣ ಹೆಚ್ಚಳವಾಗಿದೆ. ಲಿಂಗನಮಕ್ಕಿ ಜಲಾಶಯಕ್ಕೆ ಈ ಮಳೆಗಾಲದಲ್ಲಿ ಇದೇ ಮೊದಲು ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ನೀರಿನ ಮಟ್ಟ ಕಳೆದ 24 ಗಂಟೆಯಲ್ಲಿ 3.90 ಅಡಿಯಷ್ಟು ಹೆಚ್ಚಳವಾಗಿದೆ. ತುಂಗಾ ಮತ್ತು ಭದ್ರಾ ಜಲಾಶಯಗಳಲ್ಲು ಒಳ ಹರಿವು ಹಚ್ಚಳವಾಗಿದೆ.➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಲಿಂಗನಮಕ್ಕಿ ಜಲಾಶಯ
- ಗರಿಷ್ಠ ಮಟ್ಟ: 1819.00 ಅಡಿ
- ಇಂದಿನ ಜಲಮಟ್ಟ: 1781.85 ಅಡಿ (24 ಗಂಟೆಯಲ್ಲಿ 3.90 ಅಡಿ ಏರಿಕೆ)
- ಒಟ್ಟು ಜಲಸಾಮರ್ಥ್ಯ: 151.64 ಟಿಎಂಸಿ
- ಲಭ್ಯವಿರುವ ನೀರು: 57.81 ಟಿಎಂಸಿ
- ಒಳಹರಿವು: 77,580 ಕ್ಯೂಸೆಕ್
- ಹೊರಹರಿವು: 2,066 ಕ್ಯೂಸೆಕ್
ತುಂಗಾ ಜಲಾಶಯ
- ಗರಿಷ್ಠ ಮಟ್ಟ: 588.24 ಮೀಟರ್
- ಇಂದಿನ ಜಲಮಟ್ಟ: 587.36 ಮೀಟರ್
- ಒಟ್ಟು ಜಲಸಾಮರ್ಥ್ಯ: 3.24 ಟಿಎಂಸಿ
- ಲಭ್ಯವಿರುವ ನೀರು: 2.755 ಟಿಎಂಸಿ
- ಒಳಹರಿವು: 67,171 ಕ್ಯೂಸೆಕ್
- ಹೊರಹರಿವು: 72,460 ಕ್ಯೂಸೆಕ್
ಭದ್ರಾ ಜಲಾಶಯ
- ಗರಿಷ್ಠ ಮಟ್ಟ: 186 ಅಡಿ
- ಇಂದಿನ ಜಲಮಟ್ಟ: 160 ಅಡಿ 3 ಇಂಚು
- ಒಟ್ಟು ಜಲಸಾಮರ್ಥ್ಯ: 71.535 ಟಿಎಂಸಿ
- ಲಭ್ಯವಿರುವ ನೀರು: 43.147 ಟಿಎಂಸಿ
- ಒಳಹರಿವು: 31,874 ಕ್ಯೂಸೆಕ್
- ಹೊರಹರಿವು: 185 ಕ್ಯೂಸೆಕ್

ಇದನ್ನೂ ಓದಿ:➤ ಶಿವಮೊಗ್ಗದಲ್ಲಿ 2 ದಿನದಿಂದ ಮಳೆ ಅಬ್ಬರ, ಜುಲೈನಲ್ಲಿ ತೀವ್ರ ಕೊರತೆ, ಇಡೀ ತಿಂಗಳು ಎಷ್ಟಾಗಿದೆ ವರ್ಷಧಾರೆ?