ಹೊಳೆಹೊನ್ನೂರು: ಕೌಟುಂಬಿಕ ಕಲಹದ ವೇಳೆ ಮಗನೇ ತಂದೆಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಿಶಿಣ ಘಟ್ಟ ತಾಂಡಾದಲ್ಲಿ ನಡೆದಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಶಿವಗನಾಯ್ಕ (55) ಮೃತ ದುರ್ದೈವಿ. ಕಳೆದ ರಾತ್ರಿ ಕೌಟುಂಬಿಕ ಕಲಹದ ವೇಳೆ ಪುತ್ರ ಮಂಜುನಾಥ ನಾಯ್ಕ ಶಿವಗ ನಾಯ್ಕ ಅವರ ಕತ್ತು ಹಿಸುಕಿದ್ದಾನೆ. ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಶಿವಗ ನಾಯ್ಕ ಸ್ಥಳದಲ್ಲೇ ಉಸಿರು ನಿಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಭೇಟಿ
ಘಟನೆಯ ಮಾಹಿತಿ ತಿಳಿದು ಹೊಳೆಹೊನ್ನೂರು ಠಾಣೆ ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಇನ್ನು, ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಅವರು ಅರಿಶಿಣ ಘಟ್ಟ ತಾಂಡಾಗೆ ಭೇಟಿ ನೀಡಿ ತನಿಖಾಧಿಕಾರಿಗಳಿಂದ ಮಾಹಿತಿ ಪಡೆದರು.
ಇದನ್ನೂ ಓದಿ:➤ ಭದ್ರಾವತಿ ಶಾಸಕ ಸಂಗಮೇಶ್ವರ ರಾಜೀನಾಮೆ ನಿರ್ಧಾರ, ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ, ಏನೆಲ್ಲ ಹೇಳಿದ್ದಾರೆ?