ಹರಿಗೆ ಬಳಿ ಭೀಕರ ಅಪಘಾತ, ಮೂರು ಭಾಗವಾದ ಕಾರು, ಚಾಲಕ ಸಾವು, ಹೇಗಾಯ್ತು ಘಟನೆ?

ಶಿವಮೊಗ್ಗ: ಹರಿಗೆಯ ಸಕ್ಕರೆ ಕಾರ್ಖಾನೆ ಬಳಿ ಬೆಂಗಳೂರು – ಹೊನ್ನಾವರ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ, ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. (ಶಿವಮೊಗ್ಗ ಲೈವ್‌.ಕಾಂ | ಮುಂದಿನ 4 ಪ್ಯಾರಾಗಳು ಕೆಳಗಿವೆ)

ಶಿವಮೊಗ್ಗದ ಸೀಗೆಹಟ್ಟಿ ನಿವಾಸಿಯಾದ ಗುರುರಾಜ್ (22) ಮೃತ ದುರ್ದೈವಿ. ಆಟೋ ಚಾಲಕ ಗುರುರಾಜ್ ಅವರು ಇಂದು ಬೆಳಗಿನ ಜಾವ ಶಿವಮೊಗ್ಗದಿಂದ ಭದ್ರಾವತಿಯತ್ತ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಮೂರು ಭಾಗವಾಗಿ ಜಖಂಗೊಂಡಿದೆ.

Car-Incident-near-Harige-in-Shimoga

ಘಟನೆಯಲ್ಲಿ ಗುರುರಾಜ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗದ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.