ಗುಡ್ಡದ ಅರಕೆರೆಯಲ್ಲಿ ₹1.20 ಲಕ್ಷದ ಪೈಪ್‌ಗಳು ನಾಪತ್ತೆ, ಪುರದಾಳ್‌ ಪಿಡಿಒ ದೂರು, ಏನಿದು ಕೇಸ್‌?

ಶಿವಮೊಗ್ಗ: ಗುಡ್ಡದ ಅರಕೆರೆ ಗ್ರಾಮದ ಎಸ್‌ಡಿಎಚ್‌ ಲೇಔಟ್‌ನಲ್ಲಿ ನಿರ್ಮಿಸಲಾಗಿದ್ದ ಓವರ್‌ಹೆಡ್‌ ವಾಟರ್‌ ಟ್ಯಾಂಕ್‌ಗೆ ಅಳವಡಿಸಿದ್ದ ಸುಮಾರು ₹1.20 ಲಕ್ಷ ಮೌಲ್ಯದ 20 ಪೈಪ್‌ಗಳು ಕಳ್ಳತನವಾಗಿವೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಪುರದಾಳ್ ಗ್ರಾಮ ಪಂಚಾಯಿತಿ ಪಿಡಿಒ ಪರಮೇಶ್ವರಪ್ಪ ಅವರು ನೀಡಿದ ದೂರಿನ ಮೇರೆಗೆ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

070426-Tunga-Nagara-Police-Station-General-Image.avif

ದೂರಿನಲ್ಲಿ ಏನಿದೆ?

ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ವತಿಯಿಂದ ಗುಡ್ಡದ ಅರಕೆರೆ ಎಸ್‌ಡಿಎಚ್‌ ಲೇಔಟ್‌ನಲ್ಲಿ ಓವರ್‌ಹೆಡ್‌ ವಾಟರ್‌ ಟ್ಯಾಂಕ್‌ ನಿರ್ಮಿಸಿ, ಅದಕ್ಕೆ ವಾಟರ್‌ ಪೈಪ್‌ಗಳನ್ನು ಅಳವಡಿಸಲಾಗಿತ್ತು. ಜುಲೈ 30ರಂದು ಟ್ಯಾಂಕ್‌ಗೆ ಅಳವಡಿಸಿದ್ದ 20 ಪೈಪ್‌ಗಳು ನಾಪತ್ತೆಯಾಗಿದ್ದವು ಎಂದು ಆರೋಪಿಸಲಾಗಿದೆ. ತುಂಗಾ ನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.