ಗ್ಯಾರೇಜ್‌ನ ಕ್ಯಾಶ್‌ ಡ್ರಾದಿಂದ ಹಣ ನಾಪತ್ತೆ, CCTV ಪರಿಶೀಲಿಸಿದಾಗ ಮಾಲೀಕನಿಗೆ ಆಘಾತ, ಆಗಿದ್ದೇನು?

ಶಿವಮೊಗ್ಗ: ಆಟೋ ಕಾಂಪ್ಲೆಕ್ಸ್‌ನಲ್ಲಿರುವ ಕಾರ್ ಗ್ಯಾರೇಜ್‌ವೊಂದರಲ್ಲಿ ಕ್ಯಾಶ್ ಡ್ರಾನಲ್ಲಿದ್ದ ಹಣವನ್ನು ಕಳವು ಮಾಡಲಾಗಿದ್ದು, ಈ ಕೃತ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರವಿ.ಎನ್ ಎಂಬುವವರು ಶಿವಮೊಗ್ಗ ನಗರದ ಆಟೋ ಕಾಂಪ್ಲೆಕ್ಸ್‌ನ 2ನೇ ಕ್ರಾಸ್‌ನಲ್ಲಿ ಗ್ಯಾರೇಜ್ ನಡೆಸುತ್ತಿದ್ದಾರೆ. ಜುಲೈ 29ರ ರಾತ್ರಿ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ಕ್ಯಾಶ್ ಡ್ರಾನಲ್ಲಿಟ್ಟಿದ್ದ ₹30,000 ನಗದು ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಕೂಡ ಗ್ಯಾರೇಜ್‌ನಲ್ಲಿ ಎರಡು ಬಾರಿ ಹಣ ಕಳುವಾಗಿದ್ದು, ಬೇರೆ ಯಾರೋ ಕಳವು ಮಾಡಿರಬಹುದು ಎಂದು ಮಾಲೀಕರು ಸುಮ್ಮನಿದ್ದರು.

Vinobanagara-Police-Station.avif

ಗ್ಯಾರೇಜ್‌ಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಹಿಂದೆ ಕಳುವಾದ ಹಣ ಸೇರಿದಂತೆ ಒಟ್ಟು ₹48,000 ಹಣವನ್ನು ಕೆಲಸಗಾರನೇ ಕಳವು ಮಾಡಿರುವುದು ಗೊತ್ತಾಗಿದೆ. ಈ ಕುರಿತು ಗ್ಯಾರೇಜ್ ಮಾಲೀಕ ರವಿ ಅವರು ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.