ಅರಹತೊಳಲು ಗ್ರಾಮದಲ್ಲಿ ಕೊನೆಗು ಸೆರೆ ಸಿಕ್ತು ಮುಸಿಯ

ಹೊಳೆಹೊನ್ನೂರು: ಸಮೀಪದ ಅರಹತೊಳಲು ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಮುಸಿಯವನ್ನು ಬನವಾಸಿಯಿಂದ ಬಂದ ವಿಶೇಷ ತಂಡವು ಸೆರೆಹಿಡಿದಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಭಾನುವಾರ ಈ ಮುಸಿಯ ಗ್ರಾಮದ ಬಾಲಕನೊಬ್ಬನ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಒಂಟಿಯಾಗಿ ಯಾರೇ ಕಂಡರೂ ದಾಳಿಗೆ ಮುಂದಾಗುತ್ತಿದ್ದರಿಂದ ಗ್ರಾಮಸ್ಥರು ಮನೆಯಿಂದ ಹೊರಬರಲು ಭಯ ಪಡುವಂತಾಗಿತ್ತು. ಈ ಹಿನ್ನಲೆ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಬನವಾಸಿಯ ವೀರಯ್ಯ ಸಗಣಚಾರಿ ನೇತೃತ್ವದ ತಂಡವನ್ನು ಕರೆಯಿಸಲಾಯಿತು.

Monkey-trapped-in-bone-at-arahatolalu.

ಮುಸಿಯವನ್ನು ಸೆರೆ ಹಿಡಿಯಲಾಗಿದ್ದು, ಅದನ್ನು ದಟ್ಟ ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಮನೋಹರ್, ಕೆ. ಹನುಮಂತಪ್ಪ ಹಾಗೂ ಪಿಡಿಒ ಎನ್. ದೊರೆ ಪಾಲ್ಗೊಂಡಿದ್ದರು.