ಶಿವಮೊಗ್ಗ – ಸಾಗರ ಬಸ್ಸಿನಲ್ಲಿ ಗಾಢ ನಿದ್ರೆಗೆ ಜಾರಿದ ಮಹಿಳೆ, ಎದ್ದಾಗ ಕಾದಿತ್ತು ಆಘಾತ, ಆಗಿದ್ದೇನು?

ಸಾಗರ: ಶಿವಮೊಗ್ಗದಿಂದ ಕಾರ್ಗಲ್‌ಗೆ ತೆರಳುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ₹17.55 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗದ ಟಿಪ್ಪುನಗರದ ನಿವಾಸಿ ರಮ್ಲಾ ಎಂಬುವವರು ಜುಲೈ 11 ರಂದು ಸೊಸೆ ಹಸೀನಾ ಅವರೊಂದಿಗೆ ಕಾರ್ಗಲ್‌ನಲ್ಲಿನ ಗೃಹಪ್ರವೇಶ ಕಾರ್ಯಕ್ರಮಕ್ಕೆ ತೆರಳಲು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ತಮ್ಮೊಂದಿಗೆ ವ್ಯಾನಿಟಿ ಬ್ಯಾಗ್‌ ಇಟ್ಟುಕೊಂಡಿದ್ದರು. ಅದರೊಳಗೆ ಇದ್ದ ಪರ್ಸ್‌ನಲ್ಲಿ 171 ಗ್ರಾಂ ತೂಕದ ಚಿನ್ನಾಭರಣ ಹಾಗೂ ₹45,000 ನಗದು ಇತ್ತು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Police-Jeep-at-Shimoga-General-Image

ಆಲ್ಕೊಳದಲ್ಲಿ ಹತ್ತಿ ಮಹಿಳೆ ಮೇಲೆ ಅನುಮಾನ

ಬಸ್ ಆಲ್ಕೊಳ ಬಳಿ ಬಂದಾಗ ಮಹಿಳೆಯೊಬ್ಬರು ಬಸ್‌ ಹತ್ತಿದ್ದು, ರಮ್ಲಾ ಅವರ ಪಕ್ಕದಲ್ಲಿ ಬಂದು ಕುಳಿತಿದ್ದರು. ಆಯನೂರು ದಾಟಿದ ನಂತರ ರಮ್ಲಾ ನಿದ್ರೆಗೆ ಜಾರಿದ್ದರು. ಬಸ್ ಯಡೇಹಳ್ಳಿ ಹತ್ತಿರ ತಲುಪಿದಾಗ ಎಚ್ಚರಗೊಂಡು ನೋಡಿದಾಗ ವ್ಯಾನಿಟಿ ಬ್ಯಾಗ್ ಜಿಪ್ ತೆರೆದಿರುವುದು ಕಂಡುಬಂದಿದೆ. ತಕ್ಷಣ ಪರಿಶೀಲಿಸಿದಾಗ ಒಡವೆ ಹಾಗೂ ನಗದು ಇದ್ದ ಪರ್ಸ್ ನಾಪತ್ತೆ ಆಗಿರುವುದು ಗೊತ್ತಾಗಿದೆ. ಸೀಟಿನಲ್ಲಿ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ಆನಂದಪುರದಲ್ಲಿ ಇಳಿದುಕೊಂಡಿರುವುದು ತಿಳಿದುಬಂದಿದೆ. ಆಕೆಯ ಮೇಲೆಯೇ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಏನೇನೆಲ್ಲ ಕಳ್ಳತನವಾಗಿದೆ?

ಕಳ್ಳತನವಾದ ಒಟ್ಟು ಸ್ವತ್ತುಗಳಲ್ಲಿ ₹5 ಲಕ್ಷ ಮೌಲ್ಯದ ಎರಡು ಎಳೆಯ ಮಾಂಗಲ್ಯ ಸರ, ₹5 ಲಕ್ಷ ಮೌಲ್ಯದ ಲಾಂಗ್ ಚೈನ್, ₹4 ಲಕ್ಷ ಮೌಲ್ಯದ ಎರಡು ಬಳೆಗಳು, ₹1.40 ಲಕ್ಷ ಮೌಲ್ಯದ ಜುಮುಕಿ-ಬೆಂಡೋಲೆ, ₹80,000 ಮೌಲ್ಯದ ಬ್ರೇಸ್‌ಲೆಟ್, ₹60,000 ಮೌಲ್ಯದ ಮೂರು ಉಂಗುರಗಳು, ₹30,000 ಮೌಲ್ಯದ ಓಲೆಗಳು ಹಾಗೂ ₹45,000 ನಗದು ಸೇರಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕುಟುಂಬದೊಂದಿಗೆ ಚರ್ಚಿಸಿ ತಡವಾಗಿ ದೂರ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.