ಶಿವಮೊಗ್ಗ: ನಗರದ ಗೋಪಿ ಸರ್ಕಲ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, 4 ನಗರ ಸಾರಿಗೆ ಬಸ್ಗಳ ಸಂಚಾರ ಮಾರ್ಗವನ್ನು ಬದಲಾಯಿಸಿ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.
ಗೋಪಿ ಸರ್ಕಲ್ನಿಂದ ಜೆಪಿಎನ್ ರಸ್ತೆ, ಜ್ಯುವೆಲ್ ರಾಕ್ ಹೋಟೆಲ್ ರಸ್ತೆ, ಕುವೆಂಪು ರಸ್ತೆ ಹಾಗೂ ಜೈಲ್ ಸರ್ಕಲ್ ಮೂಲಕ ಲಕ್ಷ್ಮೀ ಟಾಕೀಸ್ ವರೆಗಿನ ಕಿರಿದಾದ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರದಿಂದ ದ್ವಿಚಕ್ರ ಮತ್ತು ಲಘು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ದೂರುಗಳು ಬಂದಿದ್ದವು. ಹಾಗಾಗಿ ಪೊಲೀಸ್ ಅಧೀಕ್ಷಕರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಸ್ತಾವನೆಯಂತೆ ಬಸ್ ಮಾರ್ಗಗಳ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.

ಯಾವ್ಯಾವ ಬಸ್ ಮಾರ್ಗ ಬದಲಾವಣೆ?

ವಾಹನ ಸಂಖ್ಯೆ ಕೆಎ-19-ಎಬಿ-2246 (ಪರವಾನಿಗೆ ಸಂಖ್ಯೆ: 67/97-98): ಈತನಕ ಗೋಪಿ ಸರ್ಕಲ್ – ಮೆಗ್ಗಾನ್ ಆಸ್ಪತ್ರೆ ಗೇಟ್ – ಜ್ಯುವೆಲ್ ರಾಕ್ ಹೋಟೆಲ್ – ಕುವೆಂಪು ರಸ್ತೆ – ಪಿ ಅಂಡ್ ಟಿ ಕ್ವಾರ್ಟರ್ಸ್ ಮೂಲಕ ವಿನೋಬನಗರ ಮಾರ್ಗದಲ್ಲಿ ಚಲಿಸುತಿತ್ತು. ಇನ್ಮುಂದೆ ಗೋಪಿ ಸರ್ಕಲ್ – ಬಲರಾಜ ಅರಸ್ ಸರ್ಕಲ್ – ಮಹಾವೀರ್ ಸರ್ಕಲ್ – ಸವಳಂಗ ರಸ್ತೆ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.

ವಾಹನ ಸಂಖ್ಯೆ ಕೆಎ-18-ಎಫ್-4235 (ಪರವಾನಿಗೆ ಸಂಖ್ಯೆ: 11/95-96): ಈತನಕ ಗೋಪಿ ಸರ್ಕಲ್ – ಜ್ಯುವೆಲ್ ರಾಕ್ ಹೋಟೆಲ್ ರಸ್ತೆ – ಕುವೆಂಪು ರಸ್ತೆ – ಜೈಲ್ ಸರ್ಕಲ್ – ಲಕ್ಷ್ಮೀ ಟಾಕೀಸ್ ಮಾರ್ಗವಾಗಿ ತೆರಳುತಿತ್ತು. ಇನ್ಮುಂದೆ ಗೋಪಿ ಸರ್ಕಲ್ – ಬಾಲರಾಜ ಅರಸ್ ಸರ್ಕಲ್ – ಮಹಾವೀರ ಸರ್ಕಲ್ – ಸವಳಂಗ ರಸ್ತೆ ಮೂಲಕ ಬದಲಾಯಿಸಲಾಗಿದೆ.

ವಾಹನ ಸಂಖ್ಯೆ ಕೆಎ-18-ಎಫ್-4235 (ಪರವಾನಿಗೆ ಸಂಖ್ಯೆ: 51/98-99): ಈತನಕ ಗೋಪಿ ಸರ್ಕಲ್ – ಮೆಗ್ಗಾನ್ ಆಸ್ಪತ್ರೆ ಗೇಟ್ – ಜ್ಯುವೆಲ್ ರಾಕ್ ಹೊಟೇಲ್ ರಸ್ತೆ – ಕುವೆಂಪು ರಸ್ತೆ – ಪಿ ಅಂಡ್ ಟಿ ಕ್ವಾರ್ಟರ್ಸ್ ಮೂಲಕ ವಿನೋಬನಗರ ತಲುಪಿತಿತ್ತು. ಇನ್ಮುಂದೆ ಗೋಪಿ ಸರ್ಕಲ್ – ಬಾಲರಾಜ ಅರಸ್ ರಸ್ತೆ – ಮಹಾವೀರ ಸರ್ಕಲ್ – ಸವಳಂಗ ರಸ್ತೆ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.

ವಾಹನ ಸಂಖ್ಯೆ ಕೆಎ-20-ಎಫ್-2199 (ಪರವಾನಿಗೆ ಸಂಖ್ಯೆ: 63/92-93): ಈ ಬಸ್ ಕೂಡ ಇನ್ಮುಂದೆ ಗೋಪಿ ಸರ್ಕಲ್ನಿಂದ ಬಾಲರಾಜ ಅರಸ್ ಸರ್ಕಲ್ – ಮಹಾವೀರ ಸರ್ಕಲ್ – ಸವಳಂಗ ರಸ್ತೆ ಮಾರ್ಗದ ಮೂಲಕ ಬದಲಿ ಮಾರ್ಗದಲ್ಲಿ ಸಂಚರಿಸಲಿದೆ.