ಮಳೆ ವರದಿ: ಕಳೆದ ವಾರ ಅಬ್ಬರಿಸಿದ್ದ ವರುಣ ಮೂರ್ನಾಲ್ಕು ದಿನದಿಂದ ತುಸು ತಣ್ಣಗಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 13.43 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟಾಗಿದೆ?
ಆಗಸ್ಟ್ 6ರ ಬೆಳಿಗ್ಗೆ 8.30 ರಿಂದ ಆಗಸ್ಟ್ 7ರ ಬೆಳಿಗ್ಗೆ 8.30ರವರೆಗೆ ಶಿವಮೊಗ್ಗ ತಾಲೂಕಿನಲ್ಲಿ 3.70 ಮಿ.ಮೀ, ಭದ್ರಾವತಿ 2.20 ಮಿ.ಮೀ, ತೀರ್ಥಹಳ್ಳಿ 17.90 ಮಿ.ಮೀ, ಸಾಗರ 31.70 ಮಿ.ಮೀ, ಶಿಕಾರಿಪುರ 4.90 ಮಿ.ಮೀ, ಸೊರಬ 12.00 ಮಿ.ಮೀ, ಹೊಸನಗರ ತಾಲೂಕಿನಲ್ಲಿ 21.60 ಮಿ.ಮೀ ಮಳೆಯಾಗಿದೆ.

ವಾಡಿಕೆಗಿಂತಲು ಹೆಚ್ಚು ಮಳೆ ಸಾಧ್ಯತೆ
ಈ ವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿತ್ತು. ಜಿಲ್ಲಾಡಳಿತದ ವರದಿಯ ಪ್ರಕಾರ ಜೂನ್ ತಿಂಗಳಲ್ಲಿ ಶೇ.44ರಷ್ಟು ಮತ್ತು ಜುಲೈ ತಿಂಗಳಲ್ಲಿ ಶೇ.43ರಷ್ಟು ಮಳೆ ಕೊರತೆಯಾಗಿದೆ. ಆದರೆ ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತಲು ಹಚ್ಚು ಮಳೆಯಾಗುವ ಸಾದ್ಯತೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳ ವಾಡಿಕೆ ಮಳೆ 404.71 ಮಿ.ಮೀ. ಕಳೆದ ಒಂದು ವಾರದಲ್ಲಿ 210.49 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ.