ಸೊರಬ: ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ತಮ್ಮ ತವರು ಕ್ಷೇತ್ರ ಸೊರಬಕ್ಕೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ ಅವರಿಗೆ ಕ್ಷೇತ್ರದ ಜನರು ಅದ್ಧೂರಿ ಸ್ವಾಗತ ಕೋರಿದರು. ಈ ವೇಳೆ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದರು.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಬಂಗಾರಧಾಮದಲ್ಲಿ ಪೂಜೆ, ನಮನ
ಬೆಳಿಗ್ಗೆ ಸೊರಬದ ಬಂಗಾರಧಾಮಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ಶಕುಂತಲಾ ಬಂಗಾರಪ್ಪ ಅವರ ಸಮಾಧಿಗೆ ನಮನ ಸಲ್ಲಿಸಿದ್ದರು. ಈ ವೇಳೆ ಸೊರಬ ಪ್ರಮುಖರು, ಕಾಂಗ್ರೆಸ್ ಪಕ್ಷದ ಮುಖಂಡರು ಇದ್ದರು.

ಸಾರ್ವಜನಿಕರು, ಕಾರ್ಯಕರ್ತರು ಭೇಟಿ
ಸಚಿವ ಸ್ಥಾನ ನನಗೆ ಸಿಕ್ಕ ಗೌರವವಲ್ಲ, ಇದು ಸೊರಬದ ಪ್ರತಿ ನಾಗರಿಕನಿಗೆ ಸಂದ ಗೌರವ. ಸಚಿವನಾಗಿ ಅಲ್ಲ, ನಿಮ್ಮ ಮನೆಯ ಮಗನಾಗಿ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. – ಮಧು ಬಂಗಾರಪ್ಪ, ಸಚಿವ
ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ
ಸೊರಬದ ರಂಗಮಂದಿರದಲ್ಲಿ ವಿವಿಧ ಸರ್ಕಾರಿ ಯೋಜನೆಗಳಡಿ ಸೌಲಭ್ಯಗಳನ್ನು ವಿತರಿಸಿದರು. ದೇವರಾಜ್ ಅರಸು ಅಭಿವೃದ್ಧಿ ನಿಗಮದ 132 ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಕೈಗಾರಿಕೆ ಇಲಾಖೆಯಿಂದ 70 ಹೊಲಿಗೆ ಯಂತ್ರ ಹಾಗೂ 14 ಜನರಿಗೆ ಗಾರೆ ಕೆಲಸದ ಕಿಟ್‌ಗಳು, ಜಲ ಜೀವನ್ ಮಿಷನ್ ಯೋಜನೆ ಅಡಿ 67 ಫಲಾನುಭವಿಗಳಿಗೆ ವಿಶೇಷ ಕಿಟ್, ಆನವಟ್ಟಿ ಪಟ್ಟಣ ಪಂಚಾಯಿತಿ ವತಿಯಿಂದ ಎಸ್‌ಸಿ ಸಮುದಾಯದ 3 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳ ವಿತರಣೆ ಮಾಡಲಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟೆ, ಜಿ.ಪಂ. ಸಿಇಒ ಹೇಮಂತ್, ಎಸ್‌ಪಿ ನಿಖಿಲ್ ಬಿ. ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.