ಪಿಳ್ಳಂಗಿರಿ ಕೆಪಿಎಸ್‌ ಶಾಲೆಗೆ ಸಮಗ್ರ ಚಾಂಪಿಯನ್‌ಶಿಪ್‌, ಯಾವೆಲ್ಲ ಸ್ಪರ್ಧೆಯಲ್ಲಿ ಮಕ್ಕಳು ಬಹುಮಾನ ಗೆದ್ದಿದ್ದಾರೆ?

ಶಿವಮೊಗ್ಗ: ನಗರದ ನೆಹರೂ ಕ್ರೀಡಾಂಗಣದಲ್ಲಿ ನಡೆದ 2026-27ನೇ ಸಾಲಿನ ಸರ್ಕಾರಿ ಶಾಲೆಗಳ ಎ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪಿಳ್ಳಂಗಿರಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಸಮಗ್ರ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾರೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಯಾವೆಲ್ಲ ಬಹುಮಾನ ಗೆದ್ದಿದ್ದಾರೆ?

ಬಾಲಕರ ವಿಭಾಗ: 100 ಮೀ. (ಪ್ರಥಮ / ದ್ವಿತೀಯ), 200 ಮೀ. (ಪ್ರಥಮ / ದ್ವಿತೀಯ), 400 ಮೀ. (ಪ್ರಥಮ), 800 ಮೀ. (ಪ್ರಥಮ), ನಡಿಗೆ (ಪ್ರಥಮ), ಹರ್ಡಲ್ಸ್ (ಪ್ರಥಮ / ದ್ವಿತೀಯ), ಶಾಟ್ ಪುಟ್ (ಪ್ರಥಮ / ದ್ವಿತೀಯ), ಉದ್ದಜಿಗಿತ (ಪ್ರಥಮ / ದ್ವಿತೀಯ), ಎತ್ತರಜಿಗಿತ (ಪ್ರಥಮ), 4×400 ರಿಲೆ (ದ್ವಿತೀಯ), ವಾಲಿಬಾಲ್ (ಪ್ರಥಮ) ಹಾಗೂ ಬಾಲ್ ಬ್ಯಾಡ್ಮಿಂಟನ್‌ನಲ್ಲಿ (ದ್ವಿತೀಯ) ಸ್ಥಾನಗಳನ್ನು ಪಡೆದಿದ್ದಾರೆ.

Pillangiri-Karnataka-Public-School-Championship

ಬಾಲಕಿಯರ ವಿಭಾಗ: ವಾಲಿಬಾಲ್ (ಪ್ರಥಮ), ಥ್ರೌಬಾಲ್ (ಪ್ರಥಮ), ಬಾಲ್‌ಬ್ಯಾಡ್ಮಿಂಟನ್ (ಪ್ರಥಮ), ಹರ್ಡಲ್ಸ್ (ಪ್ರಥಮ), ನಡಿಗೆ (ದ್ವಿತೀಯ / ತೃತೀಯ), 4×100 ಹಾಗೂ 4×400 ರಿಲೆ (ತೃತೀಯ) ಮತ್ತು 1500 ಮೀ. ಓಟದಲ್ಲಿ (ತೃತೀಯ) ಸ್ಥಾನಗಳನ್ನು ಪಡೆದಿದ್ದಾರೆ.

ವೈಯಕ್ತಿಕ ಹಾಗೂ ಸಮಗ್ರ ಗೌರವ: 9ನೇ ತರಗತಿಯ ವಿದ್ಯಾರ್ಥಿ ಕಾರ್ತಿಕ್.ಎಸ್ ಬಾಲಕರ ವೈಯಕ್ತಿಕ ಚಾಂಪಿಯನ್ ಪಡೆದಿರುತ್ತಾರೆ. ಇದರೊಂದಿಗೆ ಬಾಲಕರ ಸಮಗ್ರ ಚಾಂಪಿಯನ್‌ಶಿಪ್ ಹಾಗೂ ಬಾಲಕ-ಬಾಲಕಿಯರ ಸಮಗ್ರ ಚಾಂಪಿಯನ್‌ಶಿಪ್ ಅನ್ನು ಪಿಳ್ಳಂಗಿರಿ ಶಾಳೆಯು ತನ್ನದಾಗಿಸಿಕೊಂಡಿದೆ.

ದೈಹಿಕ ಶಿಕ್ಷಕರಾದ ರುದ್ರಪ್ಪ ಎಲ್.ಎನ್ ಮತ್ತು  ಬಿ. ನಮಿತಾ ಅವರಿಗೆ ಹಾಗೂ ವಿಜೇತ ವಿದ್ಯಾರ್ಥಿಗಳಿಗೆ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ, ಪ್ರಾಚಾರ್ಯ ಹೇಮಕೇಶವ, ಉಪ ಪ್ರಾಂಶುಪಾಲ ಶ್ರೀನಿವಾಸ ತಡಕನಹಳ್ಳಿ, ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಧರ್ಮಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಶಿಕ್ಷಕ ವೃಂದದವರು, ಪೋಷಕರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.