ಶಿವಮೊಗ್ಗ – ಬೆಂಗಳೂರು ವಿಮಾನಯಾನ ಮತ್ತೆ ಆರಂಭ, ಚೆನ್ನೈ, ಹೈದರಾಬಾದ್‌ ಸೇವೆಯು ಶುರು, ಯಾವಾಗ?

ಶಿವಮೊಗ್ಗ: ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಹಾರಟ ಪುನಾರಂಭವಾಗುತ್ತಿದೆ. ಅಕ್ಟೋಬರ್ 15ರಿಂದ ಬೆಂಗಳೂರಿಗೆ ನೇರ ವಿಮಾನ ಸೇವೆ ಶುರುವಾಗುತ್ತಿದೆ.➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಸ್ಟಾರ್‌ ಏರ್‌ನಿಂದ ಮತ್ತೊಂದು ರೂಟ್

ಶಿವಮೊಗ್ಗ – ಬೆಂಗಳೂರು ಮಧ್ಯೆ ವಿಮಾನ ಹಾರಾಟ ಆರಂಭಿಸಲು ಸ್ಟಾರ್ ಏರ್ ಸಂಸ್ಥೆ ಮುಂದಾಗಿದೆ. ಈ ಹಿಂದೆ ಈ ಮಾರ್ಗದಲ್ಲಿ ಇಂಡಿಗೋ ಸಂಸ್ಥೆ ವಿಮಾನ ಹಾರಾಟ ನಡೆಸುತ್ತಿತ್ತು. ಪೈಲೆಟ್‌ಗಳು ಹಾಗೂ ವಿಮಾನಗಳ ಕೊರತೆಯ ಕಾರಣಕ್ಕೆ ಮೇ 1ರಿಂದ ವಿಮಾನ ಸೇವೆ ಸ್ಥಗಿತಗೊಳಿಸಿತ್ತು.

Star-Air-begins-operation-from-Shimoga

ಹೆಚ್ಚು ಬೇಡಿಕೆಯ ಮಾರ್ಗದಲ್ಲಿ ವಿಮಾನ ಸಂಚಾರ ರದ್ದು ಆಗಿದ್ದರಿಂದ ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾಗಿದ್ದರು. ಹೀಗಾಗಿ ವಿಮಾನ ಸಂಚಾರವನ್ನು ಪುನರಾರಂಭಿಸಲು ಕೆಎಸ್‌ಐಐಡಿಸಿ ಸತತ ಪ್ರಯತ್ನ ನಡೆಸಿದ್ದು, ಬೇರೆ ಬೇರೆ ವಿಮಾನ ಸಂಸ್ಥೆಗಳ ನಡುವೆ ಮಾತುಕತೆ ನಡೆಸಿತ್ತು. ಇದಕ್ಕೆ ಸ್ಟಾರ್ ಏರ್ ಸಂಸ್ಥೆ ಸ್ಪಂದಿಸಿದೆ.

ಚೆನ್ನೈ, ಹೈದರಾಬಾದ್‌ಗು ಮತ್ತೆ ಹಾರಾಟ

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಚೆನ್ನೈ ಹಾಗೂ ಹೈದರಾಬಾದ್‌ಗೆ ನಿತ್ಯ ವಿಮಾನ ಹಾರಾಟ ನಡೆಸುತ್ತಿದ್ದ ಸ್ಪೈಸ್‌ ಜೆಟ್‌ ಸಂಸ್ಥೆಯು ಜೂನ್‌ 9ರಂದು ತಾಂತ್ರಿಕ ಕಾರಣದಿಂದ ತಾತ್ಕಾಲಿಕವಾಗಿ ಸೇವೆ ನಿಲ್ಲಿಸಿತ್ತು. ಸೆಪ್ಟೆಂಬರ್‌ರಿಂದ ಮತ್ತೆ ವಿಮಾನ ಹಾರಾಟ ನಡೆಸಲು ಸ್ಪೈಸ್‌ಜೆಟ್‌ ಮುಂದಾಗಿದೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಮೇ 1ಕ್ಕು ಮೊದಲು ಶಿವಮೊಗ್ಗದಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್‌, ತಿರುಪತಿ, ಗೋವಾಗೆ ಮೂರು ವಿಮಾನಯಾನ ಸಂಸ್ಥೆಗಳು ಸೇವೆ ಒದಗಿಸುತ್ತಿದ್ದವು. ಪ್ರತಿದಿನ 12 ವಿಮಾನಗಳು ಹಾರಾಟ ನಡೆಸುತ್ತಿದ್ದವು. ಇಂಡಿಗೋ ಮತ್ತು ಸ್ಪೈಸ್‌ ಜೆಟ್‌ ಸೇವೆ ರದ್ದಾಗಿದ್ದರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಕುರಿತು ಹಲವರು ಪ್ರಶ್ನೆ ಎತ್ತಿದ್ದರು. ಈಗ ಬೆಂಗಳೂರಿಗೆ ಸ್ಟಾರ್ ಏರ್ ಹಾಗೂ ಸ್ಪೈಸ್‌ ಜೆಟ್‌ ತನ್ನ ಹಳೆ ಮಾರ್ಗದಲ್ಲಿ ವಿಮಾನಯಾನ ಸೇವೆ ಪುನರಾರಂಭಗೊಂಡರೆ ಶಿವಮೊಗ್ಗ ವಿಮಾನ ನಿಲ್ದಾಣದ ವೈಭವ ಮತ್ತೆ ಮರುಕಳಿಸಲಿದೆ.