ಬಾರ್‌ ಮುಂದೆ ಬಿಯರ್‌ ಬಾಟಲಿಯಿಂದ ಯುವಕನ ಮೇಲೆ ದಾಳಿ, ಗಾಯ, ಆಗಿದ್ದೇನು?

ಶಿಕಾರಿಪುರ: ಬಾರ್ ಒಂದರ ಬಳಿ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಲಾಗಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿಕಾರಿಪುರದ ವಿಜಯಲಕ್ಷ್ಮಿ ಬಾರ್ ಎದುರು ಘಟನೆ ನಡೆದಿದೆ. ಪ್ರಕಾಶ ಎಂಬುವವರು ಕೆಲಸ ಮುಗಿಸಿ ಸ್ನೇಹಿತನೊಂದಿಗೆ ಬಾರ್‌ಗೆ ತೆರಳಿದ್ದರು. ಈ ವೇಳೆ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಖಾಲಿ ಬಿಯರ್ ಬಾಟಲಿಗಳನ್ನು ಪ್ರಕಾಶನ ಬೈಕಿನ ಬ್ಯಾಗಿನಲ್ಲಿಟ್ಟು ಗಲಾಟೆ ತೆಗೆದಿದ್ದಾನೆ. ಇದನ್ನು ಪ್ರಶ್ನಿಸಿ ಬಾಟಲಿಗಳನ್ನು ಕೆಳಗೆಹಾಕಿದ್ದಕ್ಕೆ ಕುಪಿತಗೊಂಡ ಆ ವ್ಯಕ್ತಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಿಯರ್ ಬಾಟಲಿಯಿಂದ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

Shikaripura-Town-Police-Station

ಘಟನೆಯಲ್ಲಿ ಪ್ರಕಾಶನ ಎಡಗಣ್ಣಿನ ಕೆಳಭಾಗ ಹಾಗೂ ಹುಬ್ಬಿನ ಮೇಲೆ ಗಾಯವಾಗಿ ರಕ್ತ ಬಂದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಶಿಕಾರಿಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.