ಹರ್ಷ ಮೈ ಫ್ರೀಡಂ ಸೇಲ್‌ ಆರಂಭ, ಲಕ್ಕಿ ಡ್ರಾನಲ್ಲಿ ಏಥರ್‌ ಬೈಕ್‌, ಹಲವು ಡಿಸ್ಕೌಂಟ್‌, ಆಫರ್‌ಗಳು

ಶಿವಮೊಗ್ಗ: ಡಿಜಿಟಲ್ ಹಾಗೂ ಗೃಹೋಪಕರಣಗಳ ಅತಿದೊಡ್ಡ ಮಳಿಗೆಯಾದ ಹರ್ಷದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ‘ಹರ್ಷ ಮೈ ಫ್ರೀಡಂ ಸೇಲ್’ ಆರಂಭವಾಗಿದೆ. ಗ್ರಾಹಕರು ಈ ಮಾರಾಟ ಮೇಳದಲ್ಲಿ ವಿಶಾಲ ಶ್ರೇಣಿಯ ಆಕರ್ಷಕ ವಸ್ತು-ವೈವಿಧ್ಯಗಳನ್ನು ವಿಶೇಷ ಕೊಡುಗೆಗಳೊಂದಿಗೆ ಖರೀದಿಸಬಹುದಾಗಿದೆ.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಆಗಸ್ಟ್ 8ರಂದು ಆರಂಭಗೊಂಡಿರುವ ಈ ‘ಹರ್ಷ ಮೈ ಫ್ರೀಡಂ ಸೇಲ್’ ಆಗಸ್ಟ್ 17ರವರೆಗೆ ಇರಲಿದೆ. ಈ ಬಾರಿ ಹಲವು ವಿಭಿನ್ನ ಆಫರ್‌ಗಳನ್ನು ನೀಡಲಾಗಿದೆ.

Harsha-Showroom-in-Shivamogga-Parekha-Vinayaka-Mall

ಗೆಲ್ಲಿರಿ 10 ಏಥರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು

ಪ್ರತಿ ಬಾರಿಯೂ ವಿಭಿನ್ನ ಕೊಡುಗೆಗಳನ್ನು ನೀಡುವ ಹರ್ಷ, ಈ ಬಾರಿ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಬರೋಬ್ಬರಿ 10 ಏಥರ್ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲುವ ಅವಕಾಶ ಕಲ್ಪಿಸಿದೆ. ಇದರೊಂದಿಗೆ ಗ್ರಾಹಕರ ಖರೀದಿಯನ್ನು ಇನ್ನಷ್ಟು ಸುಲಭಗೊಳಿಸಲು ವಿವಿಧ ಇಎಂಐ ಹಾಗೂ ಫೈನಾನ್ಸ್ ಸೌಲಭ್ಯಗಳು ಲಭ್ಯವಿವೆ.

ಗೃಹೋಪಕರಣಗಳ ಮೇಲೆ ಭರ್ಜರಿ ಡಿಸ್ಕೌಂಟ್‌

  • ಆಯ್ದ ಗೃಹೋಪಕರಣಗಳ ಮೇಲೆ ₹40,000 ವರೆಗೆ ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯವಿದೆ.
  • ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡಿದರೆ ₹26,000 ವರೆಗೆ ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ಸಿಗಲಿದೆ.
  • ಹಳೆಯ ಗೃಹೋಪಕರಣಗಳನ್ನು ಹೊಸದರೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಂಡರೆ ₹10,000‌ ವರೆಗಿನ ಫ್ರೀಡಂ ಬೋನಸ್ ದೊರೆಯುತ್ತದೆ.
  • ಎಲೆಕ್ಟ್ರಿಕ್ ಕೆಟಲ್, ಐರನ್ ಬಾಕ್ಸ್, ಇಂಡಕ್ಷನ್ ಹಾಗೂ ಏರ್ ಫೈಯರ್ ಸೇರಿದಂತೆ ಹಲವು ಆಕರ್ಷಕ ಉಡುಗೊರೆಗಳನ್ನು ಗ್ರಾಹಕರು ಖರೀದಿಯ ಜೊತೆಗೆ ಪಡೆಯಬಹುದು.

ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ ಆಫರ್

ವಿವಿಧ ಕಂಪನಿಗಳ ಲ್ಯಾಪ್‌ಟಾಪ್ ಹಾಗೂ ಸ್ಮಾರ್ಟ್‌ಫೋನ್‌ಗಳು ವಿಶಾಲ ಮಳಿಗೆಯಲ್ಲಿದೆ. 24 ತಿಂಗಳವರೆಗೆ ಇಎಂಐ ಸೌಲಭ್ಯ, ₹15,000 ವರೆಗೆ ಕ್ಯಾಶ್‌ಬ್ಯಾಕ್ ಹಾಗೂ UPI ಮೂಲಕ ಪಾವತಿಸಿದರೆ ₹9,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಜೊತೆಗೆ ಅಪ್‌ಗ್ರೇಡ್ ಬೋನಸ್, ವಿಶೇಷ ಉಡುಗೊರೆಗಳು ಹಾಗೂ ಬ್ಲೂಟೂತ್ ಸ್ಪೀಕರ್, ಹೆಡ್‌ಫೋನ್, ಇಯರ್‌ಬಡ್ಸ್, ಕೀಬೋರ್ಡ್, ಮೌಸ್ ಮತ್ತು ಸ್ಮಾರ್ಟ್‌ವಾಚ್ ಸೇರಿದಂತೆ ಎಲ್ಲ ರೀತಿಯ ಆಕ್ಸೆಸರೀಸ್ ಮೇಲೆ ಶೇ.75ರವರೆಗೆ ರಿಯಾಯಿತಿ ಘೋಷಿಸಲಾಗಿದೆ.