ಶಿವಮೊಗ್ಗ ರಂಗಾಯಣಕ್ಕೆ ತಂತ್ರಜ್ಞರು, ಕಲಾವಿದರ ನೇಮಕಕ್ಕೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಶಿವಮೊಗ್ಗ: ರಂಗಾಯಣದ ಶಿವಮೊಗ್ಗ ವಿಭಾಗಕ್ಕೆ ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ 3 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರನ್ನು ತಾತ್ಕಾಲಿಕವಾಗಿ ನೇಮಕ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ತಂತ್ರಜ್ಞರ ನೇಮಕ ವಿವರ

ಸಂಗೀತ, ಧ್ವನಿ-ಬೆಳಕು ಮತ್ತು ರಂಗಸಜ್ಜಿಕೆ-ವಸ್ತ್ರ ವಿಭಾಗಕ್ಕೆ ಒಟ್ಟು 3 ಜನ ತಂತ್ರಜ್ಞರನ್ನು ನೇಮಿಸಿಕೊಳ್ಳಲಾಗುತ್ತದೆ. ಪ್ರತಿ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ರಂಗಾನುಭವ ಹಾಗೂ ಕನ್ನಡ ಭಾಷೆ ಓದುವ, ಬರೆಯುವ ಮತ್ತು ಗ್ರಹಿಸುವ ಸಾಮರ್ಥ್ಯವಿರಬೇಕು. ಶೈಕ್ಷಣಿಕ ಹಾಗೂ ರಂಗಶಿಕ್ಷಣದ ಅರ್ಹತೆ ಇದ್ದವರಿಗೆ ಆದ್ಯತೆ ನೀಡಲಾಗುತ್ತದೆ. ತಂತ್ರಜ್ಞರಿಗೆ ಮಾಸಿಕ ₹25,000 ಕ್ರೋಢಿಕೃತ ವೇತನ ನೀಡಲಾಗುತ್ತದೆ. ವಯಸ್ಸಿನ ಮಿತಿ ಇರುವುದಿಲ್ಲ.

Shimoga-Rangayana-Kannada-Samskruti-Bhavana

ಕಲಾವಿದರ ನೇಮಕ ಇಲ್ಲಿದೆ ಪಾಯಿಂಟ್ಸ್‌

ಒಟ್ಟು 12 ಜನ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಿದ್ದು, ಇದರಲ್ಲಿ ಕನಿಷ್ಠ 4 ಮಹಿಳೆಯರಿಗೆ ಹಾಗೂ 4 ಎಸ್‌ಸಿ/ಎಸ್‌ಟಿ ಕಲಾವಿದರಿಗೆ ಮೀಸಲಾತಿ ಇದೆ. ಶೇ.50ರಷ್ಟು ಹುದ್ದೆಗಳು ಪ್ರಾದೇಶಿಕ ವಲಯದ ಕಲಾವಿದರಿಗೆ ಮೀಸಲಾಗಿವೆ.

ಆಯ್ದ ಕಲಾವಿದರಿಗೆ ಮೊದಲ ವರ್ಷ ಮಾಸಿಕ ₹18,000 ಹಾಗೂ ಈಗಾಗಲೇ ರಂಗಾಯಣದಲ್ಲಿ ಕೆಲಸ ಮಾಡಿರುವವರಿಗೆ ₹20,000 ವೇತನ ನೀಡಲಾಗುತ್ತದೆ.

2026ರ ಆಗಸ್ಟ್‌ 7ಕ್ಕೆ ಅನ್ವಯವಾಗುವಂತೆ ಕಲಾವಿದರ ವಯಸ್ಸು ಕನಿಷ್ಠ 18 ಹಾಗೂ ಗರಿಷ್ಠ 32 ವರ್ಷ ಮೀರಿರಬಾರದು. ಪಾರಂಪರಿಕ ಕಲಾ ಕುಟುಂಬದವರಿಗೆ 5 ವರ್ಷ ಸಡಿಲಿಕೆ ಇದೆ ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತರು ಭರ್ತಿ ಮಾಡಿದ ಅರ್ಜಿಯನ್ನು ದಿನಾಂಕ ಆಗಸ್ಟ್‌ 20ರ ಸಂಜೆ 5:30ರೊಳಗೆ ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಅಶೋಕ ನಗರ, ಹೆಲಿಪ್ಯಾಡ್ ಹಿಂಭಾಗ, ಶಿವಮೊಗ್ಗ-577201 ವಿಳಾಸಕ್ಕೆ ಖುದ್ದಾಗಿ, ಅಂಚೆ ಮೂಲಕ ಅಥವಾ admn.rangayanashivamogga@gmail.com ಇ-ಮೇಲ್ ಮೂಲಕ ಸಲ್ಲಿಸಬಹುದು. ಫೇಸ್‌ಬುಕ್ ಅಥವಾ ವೆಬ್‌ಸೈಟ್ rangayanashivamogga.karnataka.gov.in ಮೂಲಕ ಗೂಗಲ್ ಫಾರ್ಮ್ ಡೌನ್‌ಲೋಡ್ ಮಾಡಿ ಆನ್‌ಲೈನ್ ಮೂಲಕವೂ ಅರ್ಜಿ ಹಾಕಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ 08182-256353 ಅಥವಾ ಮೊಬೈಲ್ 7975229166 ಸಂಪರ್ಕಿಸಬಹುದು.