ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಶಿವಮೊಗ್ಗದ ಬಿದರೆ ಮಾಚೇನಹಳ್ಳಿ ಫ್ಲೈಓವರ್ ಮೇಲೆ ಎರಡು ಬೈಕ್‌ಗಳು ಡಿಕ್ಕಿಯಾಗಿ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಹೇಗಾಯ್ತು ಅಪಘಾತ?
ಕೆಎಸ್‌ಆರ್‌ಪಿ ಬೆಟಾಲಿಯನ್‌ನ ಪೊಲೀಸ್ ಸಿಬ್ಬಂದಿ ಶಿವಾನಂದ ರಾಥೋಡ್ ಮತ್ತು ಅವರ ಸ್ನೇಹಿತ ಈಶ್ವರ್ ಕಾಳಿ ಅವರು ಜುಲೈ 21 ರಂದು ಶಿವಮೊಗ್ಗದಿಂದ ಮಾಚೇನಹಳ್ಳಿಯ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಮಾಚೇನಹಳ್ಳಿ ಫ್ಲೈಓವರ್ ಮೇಲೆ ಎದುರಿನಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಶಿವಾನಂದ ರಾಥೋಡ್ ಮತ್ತು ಈಶ್ವರ್ ಕಾಳಿ ಕೆಳಗೆ ಬಿದ್ದಿದ್ದಾರೆ. ಶಿವಾನಂದ ರಾಥೋಡ್ ಅವರಿಗೆ ಭುಜ, ಪಕ್ಕೆ ಮತ್ತು ಕಾಲಿಗೆ ಪೆಟ್ಟು ಬಿದ್ದಿದೆ. ಈಶ್ವರ್ ಕಾಳಿ ಅವರಿಗೆ ಬೆನ್ನು ಹಾಗೂ ಸೊಂಟದ ಭಾಗದಲ್ಲಿ ಗಾಯಗಳಾಗಿವೆ ಎಂದು ಆರೋಪಿಸಲಾಗಿದೆ.

ತಕ್ಷಣ ಸಾರ್ವಜನಿಕರು ಗಾಯಾಳುಗಳನ್ನು ಎನ್.ಯು.ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಎನ್.ಹೆಚ್.ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಚಿಕಿತ್ಸೆ ಬಳಿಕ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ತಡವಾಗಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.