ಮಗುವಿಗೆ ಔಷಧ ತರಲು ಬೈಕ್‌ನಲ್ಲಿ ಹೋಗಿದ್ದ ವ್ಯಕ್ತಿಗೆ ಟ್ರಾಕ್ಟರ್‌ ಡಿಕ್ಕಿ, ಗಂಭೀರ ಗಾಯ, ಹೇಗಾಯ್ತು ಘಟನೆ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | ಹೊಳೆಹೊನ್ನೂರು

ಹೊಳೆಹೊನ್ನೂರು ಪಟ್ಟಣದ ಸಿ.ಎನ್. ರಸ್ತೆಯ ಮಸೀದಿ ಹತ್ತಿರ ಬೈಕ್‌ಗೆ ಟ್ರಾಕ್ಟರ್ ಡಿಕ್ಕಿ ಹೊಡೆದು ಸವಾರ ಗಾಯಗೊಂಡಿದ್ದಾರೆ. ಅಪಘಾತ ಎಸಗಿದ ಟ್ರಾಕ್ಟರ್ ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.  

ಹೇಗಾಯ್ತು ಅಪಘಾತ?

ಸಿದ್ದೇಶ್‌ (54) ಎಂಬುವವರು ರಾತ್ರಿ ಬೈಕ್‌ನಲ್ಲಿ ಮಗುವಿಗೆ ಔಷಧಿ ತಂದು, ಪೆಟ್ರೋಲ್ ಹಾಕಿಸಲು ಸಿ.ಎನ್. ರಸ್ತೆಯಲ್ಲಿ ತೆರಳುತ್ತಿದ್ದರು. ಆ ವೇಳೆ ಗಾಂಧಿ ಸರ್ಕಲ್ ಕಡೆಯಿಂದ ಚನ್ನಗಿರಿ ಕಡೆಗೆ ತೆರಳುತ್ತಿದ್ದ ಟ್ರಾಕ್ಟರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಸವಾರ ಕೆಳಗೆ ಬಿದ್ದು ಬಲಗಾಲು, ತೊಡೆ, ಮೊಣಕಾಲು, ಕೈ ಹಾಗೂ ಭುಜದ ಭಾಗಕ್ಕೆ ಗಾಯಗಳಾಗಿವೆ.

Holehonnuru-Police-Station-Bhadravathi-jpg

ಘಟನೆಯಲ್ಲಿ ಬೈಕ್ ಕೂಡ ಜಖಂಗೊಂಡಿದೆ. ಗಾಯಾಳು ಸಿದ್ದೇಶ್‌ ಅವರನ್ನು ಮೊದಲು ಹೊಳೆಹೊನ್ನೂರು ಸಮುದಾಯ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಿಕಿತ್ಸೆ ಕೊಡಿಸುತ್ತಿದ್ದರಿಂದ ಕುಟುಂಬದವರು ತಡವಾಗಿ ದೂರು ನೀಡಿದ್ದಾರೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.