ಕಡಜ ಹುಳುಗಳು ದಾಳಿ, ಎಂಟು ವರ್ಷದ ಬಾಲಕ ಸಾವು, ಎಲ್ಲಿ? ಹೇಗಾಯ್ತು ದಾಳಿ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | ಸಾಗರ

ಸಾಗರ ತಾಲೂಕು ಹೆಗ್ಗೋಡು ಬಳಿಯ ಅತ್ತಿಸರ ಗ್ರಾಮದಲ್ಲಿ ಕಡಜ ಹುಳುಗಳು ಕಡಿದು ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಮನೆಯ ಹಿಂದಿನ ಬಾಳೆಗಿಡದಲ್ಲಿದ್ದ ಕಡಜದ ಹುಳುವಿನ ಗೂಡಿನಿಂದಾಗಿ ವೆಂಕಟೇಶ್ ಹಾಗೂ ಅವರ ಮಗ ನಿಶ್ಚಿತ್ ಮೇಲೆ ಕಡಜ ಹುಳುಗಳು ದಾಳಿ ಮಾಡಿದ್ದವು. ಕುಟುಂಬದವರು ತಕ್ಷಣವೇ ಬಾಲಕ ಹಾಗೂ ತಂದೆಯನ್ನು ಹೆಗ್ಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು.

Sagara-Bee-attack-on-eight-year-boy-nishith

ಚಿಕಿತ್ಸೆ ಫಲಿಸದೆ ಬಾಲಕ ನಿಶ್ಚಿತ್ ಸಾವನ್ನಪ್ಪಿದ್ದಾನೆ. ತಂದೆ ವೆಂಕಟೇಶ್ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.