ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ
ಶ್ರಾವಣ ಮಾಸದ ಅಂಗವಾಗಿ ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ವಿಶೇಷ ಪೂಜೆ ಹಾಗೂ ದೇವಿಗೆ ವಿವಿಧ ಅಲಂಕಾರಗಳನ್ನು ಹಮ್ಮಿಕೊಳ್ಳಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಇಂದು ಅಮ್ಮನವರಿಗೆ ಶ್ರೀ ಮೀನಾಕ್ಷಿ ಅಲಂಕಾರ ಮಾಡಲಾಗಿತ್ತು. ಶ್ರಾವಣ ಮಾಸದ ಮೊದಲ ಶುಕ್ರವಾರದ ಹಿನ್ನೆಲೆ ದೊಡ್ಡ ಸಂಖ್ಯೆಯ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸಿದ್ದರು. ನಿಂಬೆಹಣ್ಣಿನ ದೀಪ ಬೆಳಗಿ ಪಾಪ ಪರಿಹಾರ ಮಾಡುವಂತೆ ಪ್ರಾರ್ಥಿಸಿದರು. ಇನ್ನು, ಭಕ್ತರು ಸರಾಗವಾಗಿ ದೇವಿಯ ದರ್ಶನ ಪಡೆದು, ಪ್ರದಕ್ಷಿಣೆ ಮಾಡಲು ಬ್ಯಾರಿಕೇಡ್‌ಗಳ ವ್ಯವಸ್ಥೆ ಮಾಡಲಾಗಿದೆ.

ಮುಂದೆ ಯಾವ್ಯಾವ ಅಲಂಕಾರವಿದೆ?
ಶ್ರಾವಣ ಮಾಸದ ಮುಂದಿನ ಶುಕ್ರವಾರಗಳ ದಿನಗಳಲ್ಲಿಯು ದೇವಿಗೆ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತಿದೆ. ಆಗಸ್ಟ್ 21ರಂದು ಅಮ್ಮನವರಿಗೆ ಶ್ರೀ ವರಮಹಾಲಕ್ಷ್ಮಿ ಅಲಂಕಾರ ನಡೆಯಲಿದೆ. ಆಗಸ್ಟ್ 28ರಂದು ಶ್ರೀ ಅನ್ನಪೂರ್ಣೇಶ್ವರಿ ಅಲಂಕಾರ, ಸೆಪ್ಟೆಂಬರ್ 4ರಂದು ಶ್ರೀ ಲಲಿತಪರಮೇಶ್ವರಿ ಅಲಂಕಾರ, ಸೆಪ್ಟೆಂಬರ್ 11ರಂದು ಸರ್ವಾಭರಣ ಭೂಷಿತೆ ಅಲಂಕಾರ ಮಾಡಲಾಗುತ್ತದೆ.