ಶಿವಮೊಗ್ಗಕ್ಕೆ ಅಯೋಗ್ಯ 2 ಚಿತ್ರತಂಡ, ನಟರ ಜೊತೆಗೆ ಸೆಲ್ಫಿಗೆ ಮುಗಿಬಿದ್ದ ಪ್ರೇಕ್ಷಕರು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಸಿನಿಮಾದ ಪ್ರಚಾರಕ್ಕಾಗಿ ಅಯೋಗ್ಯ 2 ಚಿತ್ರತಂಡ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿತ್ತು. ನಾಯಕ ನೀನಾಸಂ ಸತೀಶ್, ನಟರಾದ ಶಿವರಾಜ್ ಕೆ.ಆರ್.ಪೇಟೆ, ಗಿರೀಶ್ ಶಿವಣ್ಣ, ನಿರ್ದೇಶಕ ಮಹೇಶ್ ಕುಮಾರ್ ಹಾಗೂ ಶಿವಮೊಗ್ಗದ ಸಹ ನಟಿ ಶ್ವೇತಾ ನಗರದಲ್ಲಿ ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಿದರು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಗರದ ಶ್ರೀ ವೀರಭದ್ರೇಶ್ವರ ಚಿತ್ರಮಂದಿರಕ್ಕೆ ಆಗಮಿಸಿದ ಚಿತ್ರತಂಡಕ್ಕೆ ಡೊಳ್ಳು ತಂಡದಿಂದ ಸ್ವಾಗತಿಸಲಾಯಿತು. ಅಭಿಮಾನಿಗಳು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿದರು. ನಟರ ಜೊತೆಗೆ ಸೆಲ್ಫಿ ಹಾಗೂ ಫೋಟೊ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು.

Ayogya-2-Kannada-Cinema-team-visits-Shivamogga

ಮಾಧ್ಯಮಗಳ ಜೊತೆಗೆ ಮಾತನಾಡಿದ ನಟ ನೀನಾಸಂ ಸತೀಶ್‌‌, ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಜ್ಯಾದ್ಯಂತ ಜನರು ಕುಟುಂಬ ಸಹಿತ ಸಿನಿಮಾ ನೋಡಿ ಖುಷಿ ಪಡುತ್ತಿದ್ದಾರೆ. ಹಾಡು, ಕಾಮಿಡಿಯನ್ನು ಪ್ರೇಕ್ಷಕರು ತುಂಬಾ ಇಷ್ಟಪಡುತ್ತಿದ್ದಾರೆ. ನಗು ನಗುತ್ತಲೆ ಚಿತ್ರಮಂದಿರದಿಂದ ಬರುತ್ತಿದ್ದಾರೆ. ಆ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಶಿವಮೊಗ್ಗಕ್ಕೆ ಆಗಮಿಸಿದ್ದೇನೆ. ಈ ಹಿಂದೆ ಡ್ರಾಮಾ, ಮನಸಾರೆ, ಪಂಚರಂಗಿ ಸಿನಿಮಾದಲ್ಲಿ ಶಿವಮೊಗ್ಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ತಿಳಿಸಿದರು.