ಹತ್ತಕ್ಕೂ ಹೆಚ್ಚು ಮಂದಿ ಮೇಲೆ ದಿಢೀರ್‌ ದಾಳಿ ಮಾಡಿದ ನಾಯಿ, ಇಲ್ಲಿದೆ ಸಿಸಿಟಿವಿ ದೃಶ್ಯ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ನಗರದ ಆಟೊ ಕಾಂಪ್ಲೆಕ್ಸ್‌ನಲ್ಲಿ ಬೀದಿ ನಾಯಿಯೊಂದು ಹಠಾತ್ ದಾಳಿ ನಡೆಸಿ, ಸುಮಾರು ಹತ್ತು ಮಂದಿಗೆ ಕಚ್ಚಿರುವ ಘಟನೆ ನಡೆದಿದೆ. ಗಾಯಾಳುಗಳು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಸೋಮವಾರ ಆಟೊ ಕಾಂಪ್ಲೆಕ್ಸ್‌ನ ಎರಡನೇ ಅಡ್ಡರಸ್ತೆಯಲ್ಲಿ ಈ ಘಟನೆ ವರದಿಯಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಸಿಸಿಟಿವಿ ದೃಶ್ಯ ವೈರಲ್

ಆಟೊ ಕಾಂಪ್ಲೆಕ್ಸ್‌ನ ಮಳಿಗೆಯವರು, ಅಲ್ಲಿ ಕೆಲಸ ಮಾಡುವವರು ಹಾಗೂ ವಿವಿಧ ಕೆಲಸಗಳಿಗಾಗಿ ಆಗಮಿಸಿದ್ದ ಸಾರ್ವಜನಿಕರ ಮೇಲೆ ನಾಯಿ ದಾಳಿ ನಡೆಸಿದೆ. ಮಳಿಗೆಯೊಂದರ ಮುಂದೆ ನಿಂತಿದ್ದ ವ್ಯಕ್ತಿಯ ಹಿಂದಿನಿಂದ ಬಂದು ನಾಯಿ ದಿಢೀರ್ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆ ವಿಡಿಯೋ ಶಿವಮೊಗ್ಗ ಲೈವ್‌.ಕಾಂಗೆ ಲಭ್ಯವಾಗಿದೆ. ಸುಮಾರು ಹತ್ತು ಮಂದಿಗೆ ಇದೇ ನಾಯಿ ಕಚ್ಚಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Stray-Dog-Attack-on-a-person-in-Shivamogga-Auto-Complex

ಮಳಿಗೆಯವರ ಆತಂಕ

ಆಟೊ ಕಾಂಪ್ಲೆಕ್ಸ್ ನಾಲ್ಕ ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ. ಸಂಜೆ 7 ಗಂಟೆಯ ನಂತರ ಬಹುತೇಕ ಮಳಿಗೆಗಳು ಮುಚ್ಚುವುದರಿಂದ, ಆ ಬಳಿಕ ಅಲ್ಲಿ ಒಬ್ಬೊಬ್ಬರೇ ಓಡಾಡುವುದು ಕಷ್ಟವಾಗಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ನಾಯಿ ದಾಳಿಯ ವಿಡಿಯೋ ಇಲ್ಲಿ ಕೆಳಗಿದೆ.