ಶಿಕಾರಿಪುರ ಬಂದ್‌, ಬಿಗಿ ಬಂದೋಬಸ್ತ್‌, ಹೇಗಿದೆ ಪರಿಸ್ಥಿತಿ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | ಶಿಕಾರಿಪುರ

ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಗಳು ಇಂದು ಶಿಕಾರಿಪುರ ಬಂದ್‌ಗೆ ಕರೆ ನೀಡಿವೆ. ಪಟ್ಟಣದಲ್ಲಿ ಸದ್ಯ ಅಂಗಡಿ ಮುಂಗಟ್ಟು ಮುಚ್ಚಿದ್ದು, ವಾಹನ ಸಂಚಾರ ಎಂದಿನಂತೆ ಇದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಶಿಕಾರಿಪುರದಲ್ಲಿ ಸದ್ಯ ಹೇಗಿದೆ ಪರಿಸ್ಥಿತಿ?

ಬೆಳಿಗ್ಗೆ ಕ್ಯಾಂಟೀನ್‌ಗಳು, ಟೀ ಶಾಪ್‌ಗಳು, ಕೆಲವು ಅಂಗಡಿಗಳ ಬಾಗಿಲು ಎಂದಿನಂತೆ ತೆರೆಯಲಾಗಿತ್ತು, ಗ್ರಾಹಕರು ಬಂದು ಹೋಗುತ್ತಿದ್ದರು. ವಾಹನ ಸಂಚಾರವು ಎಂದಿನಂತೆಯೇ ಇದೆ. ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು, ಶಾಲೆ, ಕಾಲೇಜು ವಾಹನಗಳು ರಸ್ತೆಯಲ್ಲಿ ಕಾಣಿಸುತ್ತಿವೆ. ಪ್ರಮುಖ ಬೀದಿಗಳಲ್ಲಿ ಅಂಗಡಿ, ಮುಂಗಟ್ಟು ಬಂದ್‌ ಮಾಡಲಾಗಿದೆ. ತೆರೆದಿರುವ ಅಂಗಡಿಗಳನ್ನ ಹಿಂದೂಪರ ಸಂಘಟನೆ ಕಾರ್ಯಕರ್ತರು ಬಂದ್‌ ಮಾಡಿಸುತ್ತಿದ್ದಾರೆ.

Shikaripura-Bandh-by-Bajarangadal-and-Vishwa-Hindu-Parishad

ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ

ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್‌ ಸಂಘಟನಗಳು ಬಂದ್‌ಗೆ ಕರೆ ನೀಡಿವೆ. ಶಿಕಾರಿಪುರದ ಖಾಸಗಿ ಬಸ್‌ ನಿಲ್ದಾಣದಿಂದ ಪ್ರತಿಭಟನಾ ಮೆರವಣಿ ನಡೆಸಲು ಯೋಜಿಸಲಾಗಿದೆ. ಶಿರಾಳಕೊಪ್ಪ ಸರ್ಕಲ್‌ವರೆಗೆ (ಅಕ್ಕಮಹಾದೇವಿ ಸರ್ಕಲ್‌) ಮೆರವಣಿಗೆ ನಡೆಸಲಾಗುತ್ತದೆ. ಅಲ್ಲಿ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ.

ಬಂದ್‌ಗೆ ಕಾರಣವೇನು?

ಹೊಸನಗರ ತಾಲೂಕಿನ ಹರತಾಳು ಗ್ರಾಮದಲ್ಲಿ ಆಗಸ್ಟ್ 16ರ ರಾತ್ರಿ ಕಳ್ಳರು ಕೊಟ್ಟಿಗೆಯಲ್ಲಿ ಕಟ್ಟಿದ ಜಾನುವಾರುಗಳನ್ನು ವಾಹನಕ್ಕೆ ತುಂಬಿಕೊಂಡು ಪರಾರಿಯಾಗಿದ್ದರು. ವಿಷಯ ತಿಳಿದು ಬಜರಂಗದಳ ಕಾರ್ಯಕರ್ತರು ತಮ್ಮ ಕಾರಿನಲ್ಲಿ ಕಳ್ಳರ ವಾಹನವನ್ನು ಹಿಂಬಾಲಿಸಿದ್ದರು. ಮಾರ್ಗಮಧ್ಯೆ ಬಜರಂಗದಳ ಕಾರ್ಯಕರ್ತರ ಕಾರಿಗೆ ಮತ್ತೊಂದು ವಾಹನದಿಂದ ಡಿಕ್ಕಿ ಹೊಡೆಸಿದ ಗೋವು ಕಳ್ಳರು, ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದ ಆರೋಪಿಸಲಾಗಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋವು ಕಳ್ಳರ ಬಂಧನಕ್ಕೆ ಆಗ್ರಹಿಸಿ ಶಿಕಾರಿಪುರ ಬಂದ್‌ಗೆ ಕರೆ ನೀಡಲಾಗಿದೆ.

ಪಟ್ಟಣದಲ್ಲಿ ಪೊಲೀಸ್‌ ಬಂದೋಬಸ್ತ್‌

ಮುನ್ನೆಚ್ಚರಿಕೆ ಕ್ರಮವಾಗಿ ಶಿಕಾರಿಪುರ ಪಟ್ಟಣದಲ್ಲಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಪ್ರಮುಖ ರಸ್ತೆಗಳು, ಸರ್ಕಲ್‌ಗಳು, ಬಸ್‌ ನಿಲ್ದಾಣ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿದೆ.