ಶಿವಮೊಗ್ಗ ಲೈವ್.ಕಾಂ | ಶಿಕಾರಿಪುರ
ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳ ಕರೆ ನೀಡಿದ್ದ ಶಿಕಾರಿಪುರ ಬಂದ್ ಮತ್ತು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಹಿಂದೂ ಮುಖಂಡ ಶರಣ್ ಪಂಪ್ವೆಲ್ ಅವರನ್ನು ಪೊಲೀಸರು ತಡೆದಿದ್ದಾರೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.
ಪಟ್ಟಣದ ರಥ ಬೀದಿಯಲ್ಲಿರುವ ಆರ್.ಎಸ್.ಎಸ್. ಪಾಂಚಜನ್ಯ ಸಂಘದ ಕಚೇರಿಯಲ್ಲಿ ಶರಣ್ ಪಂಪ್ವೆಲ್ ಇದ್ದರು. ಅಲ್ಲಿಗೆ ತೆರಳಿದ ಪೊಲೀಸರು, ಪ್ರತಿಭಟನಾ ಸ್ಥಳದಿಂದ ಎರಡು ಕಿಲೋಮೀಟರ್ ದೂರದಲ್ಲೇ ಅವರನ್ನು ತಡೆದು ನಿರ್ಬಂಧದ ನೋಟಿಸ್ ಜಾರಿ ಮಾಡಿದರು.

ನೊಟೀಸ್ನಲ್ಲಿ ಏನಿದೆ?
ಶರಣ್ ಪಂಪ್ವೆಲ್ ಅವರು ಪ್ರಚೋದನಕಾರಿ ಭಾಷಣ ಮಾಡುತ್ತಾರೆ. ಇದರಿಂದ ಶಾಂತಿ ಭಂಗ ಉಂಟಾಗುವ ಸಾಧ್ಯತೆ ಇದೆ. ಇವರ ಪ್ರಚೋದನಕಾರಿ ಭಾಷಣದ ಕಾರಣಕ್ಕೆ ರಾಜ್ಯದ ವಿವಿಧೆಡೆ ಪ್ರಕರಣಗಳು ದಾಖಲಾಗಿವೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 10 ವರ್ಷದಿಂದ ವಿವಿಧ ಕಾರಣಕ್ಕೆ ಶಾಂತಿ ಭಂಗವಾಗಿದೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಆಗಸ್ಟ್ 19 ರಿಂದ ಹತ್ತು ದಿನಗಳ ಕಾಲ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.
ಅದೇಶ ಪ್ರತಿಯನ್ನು ಶರಣ್ ಪಂಪ್ವೆಲ್ ಅವರಿಗೆ ನೀಡಿದ ಪೊಲೀಸರು, ಬಳಿಕ ಅವರಿಗೆ ಎಸ್ಕಾರ್ಟ್ ನೀಡಿದ ಪೊಲೀಸರು ಜಿಲ್ಲೆಯ ಗಡಿ ದಾಟಿಸಿದರು.
ಶರಣ್ ಪಂಪ್ವೆಲ್ ಆಕ್ರೋಶ
ಪೊಲೀಸರ ಈ ಕ್ರಮಕ್ಕೆ ಶರಣ್ ಪಂಪ್ವೆಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಒಂದು ದಿನ ಮೊದಲೆ ನೊಟೀಸ್ ನೀಡಬೇಕಿತ್ತು. ಇದೀಗ ಬಂದು ನೊಟೀಸ್ ನೀಡಿದ್ದಾರೆ. ರಾಜ್ಯದಲ್ಲಿ ಇರುವುದು ಹಿಂದೂ ವಿರೋಧಿ ಸರ್ಕಾರ ಎಂಬುದು ಪುನಃ ಸಾಬೀತಾಗಿದೆ ಎಂದು ಅಸಮಾಧಾನಗೊಂಡರು.