ಬೈಕ್‌ ಮಾಲೀಕನಿಗೆ ₹27,000 ದಂಡ ವಿಧಿಸಿದ ಕೋರ್ಟ್‌, ಕಾರಣವೇನು?

ಶಿವಮೊಗ್ಗ ಲೈವ್.ಕಾಂ | ಹೊಳೆಹೊನ್ನೂರು (ಈ ಸುದ್ದಿಯನ್ನು ಇನ್ನು 20 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ವಾಹನ ನೀಡಿದ ಮಾಲೀಕನಿಗೆ ಜೆಎಂಎಫ್‌ಸಿ ನ್ಯಾಯಾಲಯ ₹27,000 ದಂಡ ವಿಧಿಸಿದೆ.

Shivamogga-Court-Building

ಬಾಲಕನಿಗೆ ವಾಹನ ನೀಡಿದ ಆರೋಪದ ಮೇರೆಗೆ ವಾಹನ ಮಾಲೀಕನ ವಿರುದ್ದ 2025ರಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ವಾಹನ ಮಾಲೀಕನಿಗೆ ದಂಡ ವಿಧಿಸಿ ತೀರ್ಪು ನೀಡಿದೆ.