ಶಿವಮೊಗ್ಗ ಜಿಲ್ಲೆಯಲ್ಲಿ ಪುನಃ ಬಿರುಸು ಪಡೆದ ಮಳೆ, ಕಳೆದ 24 ಗಂಟೆಯಲ್ಲಿ ಎಷ್ಟಾಗಿದೆ ವರ್ಷಧಾರೆ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ (ಈ ಸುದ್ದಿಯನ್ನು ಇನ್ನು 31 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ದಿನದಿಂದ ತುಸು ಜೋರಾಗಿದೆ. ಕಳೆದ 24 ಗಂಟೆಯಲ್ಲಿ ಸರಾಸರಿ 13.71 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಡಳಿತ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

Rainfall-in-Shimoga-city.

ಆಗಸ್ಟ್‌ 23ರ ಬೆಳಿಗ್ಗೆ 8:30 ರಿಂದ ಆಗಸ್ಟ್‌ 24ರ ಬೆಳಿಗ್ಗೆ 8:30ರವರೆಗೆ ತೀರ್ಥಹಳ್ಳಿಯಲ್ಲಿ 26.70 ಮಿಲಿ ಮೀಟರ್, ಸಾಗರದಲ್ಲಿ 25.80 ಮಿ.ಮೀ, ಹೊಸನಗರದಲ್ಲಿ 22.60 ಮಿ.ಮೀ, ಶಿವಮೊಗ್ಗದಲ್ಲಿ 4.90 ಮಿ.ಮೀ, ಭದ್ರಾವತಿಯಲ್ಲಿ 3.90 ಮಿ.ಮೀ, ಶಿಕಾರಿಪುರದಲ್ಲಿ 5.80 ಮಿ.ಮೀ ಮತ್ತು ಸೊರಬದಲ್ಲಿ 6.30 ಮಿ.ಮೀ ಮಳೆಯಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇನ್ನು ಆಗಸ್ಟ್‌ ತಿಂಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 344.27 ಮಿ.ಮೀ ಮಳೆಯಾಗಿದ್ದು, ವಾಡಿಕೆಯಂತೆ 404.71 ಮಿ.ಮೀ ಮಳೆ ಬೀಳಬೇಕಿತ್ತು ಎಂದು ಜಿಲ್ಲಾಡಳಿತದ ವರದಿ ತಿಳಿಸಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: