ಶಿವಮೊಗ್ಗ ಲೈವ್
ಶಿವಮೊಗ್ಗ: ಶಾಲಾ ಬಸ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು, ದಂಪತಿ ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕಿನ ಬೀರನಕೆರೆಯಿಂದ ಬೂದಿಗೆರೆ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಘಟನೆ ನಡೆದಿದೆ.
ಬೂದಿಗೆರೆಯ ಚೈತ್ರಾ ಮತ್ತು ಅವರ ಪತಿ ಗಾಯಗೊಂಡಿದ್ದಾರೆ. ಬೀರನಕೆರೆ ಕಡೆಯಿಂದ ಬಂದ ಖಾಸಗಿ ಶಾಲೆಯ ಬಸ್ಸೊಂದು ತಿರುವಿನಲ್ಲಿ ಹಾರನ್ ಮಾಡಲಿಲ್ಲ. ವೇಗವಾಗಿ ಮುಂದೆ ಸಾಗಿದ ಬಸ್ನ ಹಿಂಭಾಗವು ಬೈಕ್ ಹ್ಯಾಂಡಲ್ಗೆ ತಗುಲಿದೆ. ಬೈಕ್ನಲ್ಲಿದ್ದ ದಂಪತಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ
ಅಬ್ಬಲಗೆರೆ ಬಳಿ ತುಂಗಾ ನಾಲೆಯಲ್ಲಿ ಬಾಲಕ ನಾಪತ್ತೆ, ಆಗಿದ್ದೇನು?