KSRTC ಬಸ್‌ ಸಂಚಾರ ಪುನಾರಂಭ, ಶಿಕಾರಿಪುರದ ಐದು ಗ್ರಾಮಗಳ ಜನರ ಸಂಭ್ರಮ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿಕಾರಿಪುರ: ಕೋವಿಡ್ ನಂತರ ಸ್ಥಗಿತಗೊಂಡಿದ್ದ ಬಸ್ ಸಂಚಾರ ಪುನಾರಂಭಗೊಂಡಿದೆ. ಇದರಿಂದ ಶಿಕಾರಿಪುರ ತಾಲ್ಲೂಕಿನ ಐದು ಗ್ರಾಮಗಳಿಗೆ ಅನುಕೂಲವಾಗಿದ್ದು, ಗ್ರಾಮಸ್ಥರು ಸಂಭ್ರಮಿಸಿದರು.

ಹಿರೇಕೊರಲಹಳ್ಳಿ, ಅಂಜನಾಪುರ, ತರಲಘಟ್ಟ, ದೊಡ್ಡಜೋಗಿಹಳ್ಳಿ ಹಾಗೂ ಕೊಪ್ಪದಕರೆ ಗ್ರಾಮಗಳಿಗೆ ಬಸ್ ಸಂಪರ್ಕ ಪುನಾರಂಭವಾಗಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಂಚಾರದ ಸಮಸ್ಯೆ ನೀಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಶಿಕಾರಿಪುರ ಮುಖ್ಯರಸ್ತೆಯಿಂದ ದೂರವಿರುವ ಈ ಗ್ರಾಮಗಳ ಜನರು ಹಾಗೂ ವಿದ್ಯಾರ್ಥಿಗಳು ಮುಖ್ಯರಸ್ತೆಗೆ ಬರಲು ಮೈಲುಗಟ್ಟಲೆ ನಡೆದುಕೊಂಡು ಹೋಗಬೇಕಿತ್ತು. ಈಗ ಬಸ್ ಸಂಚಾರ ಆರಂಭವಾಗಿರುವುದರಿಂದ ಸಾರ್ವಜನಿಕರಿಗೆ ಸಂಭ್ರಮಿಸಿದರು.

KSRTC-Bus-From-Shikaripura-Hirekoralahalli

ಬೆಳಿಗ್ಗೆ 8 ಗಂಟೆಗೆ ಶಿಕಾರಿಪುರ ಬಸ್ ನಿಲ್ದಾಣದಿಂದ ಹೊರಡುವ ಬಸ್ಸು, ತರಲಘಟ್ಟ, ದೊಡ್ಡಜೋಗಿಹಳ್ಳಿ, ಕೊಪ್ಪದಕರೆ, ಅಂಜನಾಪುರ ಹಾಗೂ ಹಿರೇಕೊರಲಹಳ್ಳಿ ಮಾರ್ಗವಾಗಿ ಸಂಚರಿಸಲಿದೆ. ಸಂಜೆ 4.30 ಕ್ಕೆ ಇದೇ ಮಾರ್ಗವಾಗಿ ವಾಪಸ್ ತೆರಳಲಿದೆ ಎಂದು ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರಾದ ಡಿ.ಎನ್. ಅಂಬಿಕಾ ಉಪಸ್ಥಿತರಿದ್ದರು.