ಗೋಡಾನ್‌ನಿಂದ ಅಡಿಕೆ ಮೂಟೆಗಳು ನಾಪತ್ತೆ, CCTV ಚೆಕ್‌ ಮಾಡಿದ ಮಾಲೀಕನಿಗೆ ಆಘಾತ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಗೋಡಾನ್‌ನ ಜಾಲರಿ ಮುರಿದು ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಒಣ ಅಡಿಕೆ ದೋಚಿದ್ದಾರೆ. ಹೊಳಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

Shimoga-Police-Jeep

ಅಡಿಕೆ ವ್ಯಾಪಾರಿ ಅಕ್ರವುಲ್ಲಾ ಖಾನ್ ಎಂಬುವವರಿಗೆ ಸೇರಿದ ಗೋಡಾನ್‌ನಲ್ಲಿ ಕೃತ್ಯ ನಡೆದಿದೆ. ಗೋಡಾನ್‌ನಲ್ಲಿ ಸುಮಾರು 80 ಮೂಟೆ ಅಡಿಕೆ ಸಂಗ್ರಹಿಸಿಡಲಾಗಿತ್ತು. ಅಕ್ರವುಲ್ಲಾ ಖಾನ್ ಅವರು ಕೆಲಸ ಮುಗಿಸಿ ಗೋಡಾನ್‌ಗೆ ರಾತ್ರಿ ಬೀಗ ಹಾಕಿ ತೆರಳಿದ್ದರು. ಮರುದಿನ ಬಂದು ಪರಿಶೀಲಿಸಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.

ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳರು ರಾತ್ರಿ ವೇಳೆ ಜಾಲರಿ ಎತ್ತಿ ಒಳಗೆ ನುಗ್ಗಿರುವುದು ಗೊತ್ತಾಗಿದೆ ಎಂದು ಆರೋಪಿಸಲಾಗಿದೆ. 6 ಮೂಟೆಗಳಲ್ಲಿ ಇದ್ದ ಸುಮಾರು 4 ಕ್ವಿಂಟಾಲ್ 80 ಕೆಜಿ ತೂಕದ ಅಡಿಕೆ ಕಳ್ಳತನವಾಗಿದೆ. ಇದರ ಮೌಲ್ಯ ₹2,50,000 ಎಂದು ಅಂದಾಜಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.