ಶಿವಮೊಗ್ಗದ ಪ್ರಖ್ಯಾತ ಹೊಟೇಲ್‌, ಬೇಕರಿಗಳಿಗೆ ಡಾ. ಮೈತ್ರಿ ದಿಢೀರ್‌ ಭೇಟಿ, ಪರಿಶೀಲನೆ, ಖಡಕ್‌ ಎಚ್ಚರಿಕೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಉಪ ವಿಭಾಗಾಧಿಕಾರಿ ಡಾ. ಮೈತ್ರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶಿವಮೊಗ್ಗದ ಕೆಲವು ಹೊಟೇಲ್‌ಗಳು, ಬೇಕರಿ, ಸರ್ಕಾರಿ ಹಾಸ್ಟೆಲ್‌ಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಲವು ಲೋಪ ಕಂಡು ಬಂದಿದ್ದು, ತಕ್ಷಣ ಸರಿಪಡಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದರು. ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

Assistant-Commissioner-Dr.-H.P.S.-Mythri-inspects-hotels-in-Shivamogga

ಎಲ್ಲೆಲ್ಲಿ ನಡೆಯಿತು ಪರಿಶೀಲನೆ ?

point-1

ಶಿವಮೊಗ್ಗದ ಕೆಲವು ಹೆಸರುವಾಸಿ ಹೊಟೇಲ್‌ಗಳಿಗೆ ದಿಢೀರ್‌ ಭೇಟಿ ನೀಡಿದರು. ಹೊಟೇಲ್‌ಗಳ ಆವರಣ, ಅಡುಗೆ ಕೋಣೆಗಳಿಗೆ ತೆರಳಿದ ಡಾ. ಮೈತ್ರಿ ಖುದ್ದು ಪರಿಶೀಲನೆ ನಡೆಸಿದರು.

point-2

ನಗರದ ಕೆಲವು ಪ್ರಖ್ಯಾತ ಬೇಕರಿಗಳಿಗೆ ಹಠಾತ್‌ ಭೇಟಿ ನೀಡಿ, ಒಳಾಂಗಣ ಪರಿಶೀಲನೆ ನಡೆಸಿದರು. ಈ ವೇಳೆ ಬೇಕರಿ ಮಾಲೀಕರು, ಸಿಬ್ಬಂದಿ, ಗ್ರಾಹಕರಿಂದ ಮಾಹಿತಿ ಪಡೆದರು.

point-3

ತ್ಯಾವರೆಕೊಪ್ಪದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ತೆರಳಿದ್ದ ಡಾ. ಮೈತ್ರಿ, ಅಲ್ಲಿನ ಶುಚಿತ್ವ, ಆಹಾರದ ಗುಣಮಟ್ಟದ ಕುರಿತು ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳು, ಕೇಂದ್ರದಲ್ಲಿ ಅಶ್ರಯ ಪಡೆಯುತ್ತಿರುವವರಿಂದ ಮಾಹಿತಿ ಪಡೆದರು.

ಉಪ ವಿಭಾಗಾಧಿಕಾರಿ ನೀಡಿದ ಎಚ್ಚರಿಕೆಗಳೇನು?

ಬಳಕೆಗೆ ಯೋಗ್ಯವಲ್ಲದ ಆಹಾರ ಪದಾರ್ಥವನ್ನು ತಕ್ಷಣವೇ ವಿಲೇವಾರಿ ಮಾಡಬೇಕು. ಅಡುಗೆಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾಲು, ಮಾಂಸ ಮತ್ತು ಮೊಟ್ಟೆಗಳನ್ನು ನಿಗದಿತ ತಾಪಮಾನದಲ್ಲಿ ಸಂಗ್ರಹಿಸಬೇಕು.

ಹತ್ತು ದಿನದ ಒಳಗೆ ಲೋಪ ಸರಿಪಡಿಸಿಕೊಳ್ಳಬೇಕು. ತಪ್ಪಿದಲ್ಲಿ ಆಹಾರ ಸುರಕ್ಷತಾ ಮಾನದಂಡಗಳ ಅನ್ವಯ ಕಾನೂನು ಕ್ರಮ ಜರುಗಿಸಲಾಗುತ್ತದೆ.

ಈ ಸಂದರ್ಭ ತಹಶೀಲ್ದಾರ್‌ ವಿ.ಎಸ್.ರಾಜೀವ್, ತಾಲೂಕು ಆರೋಗ್ಯ ಅಧಿಕಾರಿ ಚಂದ್ರಶೇಖರ್ ಹಾಗೂ ಆಹಾರ ಸುರಕ್ಷತೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.