ಶಿವಮೊಗ್ಗ ಲೈವ್
ತೀರ್ಥಹಳ್ಳಿ: ತಾಲ್ಲೂಕಿನ ಹಾರೋಗೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಿದಾಳ್ ಗ್ರಾಮದ ರಂಗಪ್ಪ ಗೌಡ ಅವರ ತೋಟದಲ್ಲಿ ಭಾನುವಾರ ಹೆಬ್ಬಾವು ಕಾಣಿಸಿಕೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಚಂದ್ರು ಕೆ. ನಾಯರ್ ಅವರು ಹೆಬ್ಬಾವನ್ನು ರಕ್ಷಿಸಿದ್ದಾರೆ.

ಹಾವು 14.5 ಅಡಿ ಉದ್ದವಿದ್ದು, 27.75 ಕೆ.ಜಿ ತೂಕ ಇತ್ತು. ನಂತರ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು.
ಈ ಸುದ್ದಿಯನ್ನೂ ಓದಿ
ಜೆರಾಕ್ಸ್ ಮಾಡಿಸಲು ತೆರಳಿದ್ದ ವ್ಯಕ್ತಿ ಹತ್ಯೆ ಕೇಸ್, ಸ್ಥಳಕ್ಕೆ ಎಸ್ಪಿ ಭೇಟಿ, ಏನಿದು ಪ್ರಕರಣ?