ಬೀರು ಬಾಗಿಲು ಮುಚ್ಚಿಯೇ ಇತ್ತು, ಒಳಗಿದ್ದ ಲಕ್ಷ ಲಕ್ಷದ ಆಭರಣ, ಹಣ, ಮೊಬೈಲ್‌ ಕಣ್ಮರೆ, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ತೀರ್ಥಹಳ್ಳಿ: ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಹಣ ಕಳ್ಳತನವಾಗಿದೆ. ಮನೆಯ ಬೀರುವಿನ ಬಾಗಿಲು ಒಡೆಯದೆಯೇ ಕೃತ್ಯ ಎಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

Crime-News-General-Image

ತೀರ್ಥಹಳ್ಳಿ ತಾಲ್ಲೂಕಿನ ಮೇಲಿನ ಹಣಗೆರೆ ನಿವಾಸಿ ಶಿಕ್ಷಕ ಗಣಪತಿ.ಕೆ.ಪಿ ಅವರ ಮನೆಯಲ್ಲಿ ಘಟನೆ ನಡೆದಿದೆ. ಬೀರುವಿನಲ್ಲಿದ್ದ ಸುಮಾರು 112 ಗ್ರಾಂಗೂ ಅಧಿಕ ತೂಕದ ಚಿನ್ನದ ಸರಗಳು, ಜುಮುಕಿ, ಓಲೆ, ಬ್ರಾಸ್ಲೆಟ್, ಉಂಗುರಗಳು ಸೇರಿದಂತೆ ಅಂದಾಜು ₹14,59,900 ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿವೆ. ₹17,500 ಮೌಲ್ಯದ ಬೆಳ್ಳಿಯ ಆಭರಣ, ₹5,500 ನಗದು ಹಾಗೂ ಮೂರು ಮೊಬೈಲ್ ಫೋನ್‌ಗಳು ಸೇರಿ ಒಟ್ಟು ₹15,20,900 ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ಆರೋಪ ಮಾಡಲಾಗಿದೆ.

ಗಣಪತಿ ಅವರ ಮನೆಯ ಹಾಲ್‌ನಲ್ಲಿ ಈ ಬೀರು ಇದೆ. ಗಣಪತಿ ಅವರ ಪತ್ನಿ ಬೀರುವಿನ ಬೀಗವನ್ನು ಫ್ರೆಡ್ಜ್‌ ಮೇಲೆ ಇಟ್ಟಿದ್ದರು. ಕಳ್ಳತನ ಮಾಡಿದವರು ಮನೆಯ ಬೀರುವಿನ ಬೀಗ ಒಡೆದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಮಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.