ಎರಡು ಜಿಂಕೆಗಳ ಮಾಂಸ ಬೇಯಿಸಿದ್ದ ಮೂವರು ಅರೆಸ್ಟ್‌, ಮೂವರು ಎಸ್ಕೇಪ್

ಸಾಗರ: ವಿದ್ಯುತ್ ತಂತಿ ಹಾಯಿಸಿ ಎರಡು ಗಂಡು ಜಿಂಕೆಗಳನ್ನು ಕೊಂದು ಅವುಗಳ ಮಾಂಸವನ್ನು ಬೇಯಿಸಿದ್ದ ಹೊತ್ತಿಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಸಾಗರ ತಾಲೂಕಿನ ನಾಗವಳ್ಳಿ ಗ್ರಾಮದ ಷಾಜಿ ಎಂಬುವವರ ಜಮೀನಿನಲ್ಲಿ ಘಟನೆ ನಡೆದಿದೆ. ಜಿಂಕೆ ಮಾಂಸ ತಯಾರಿಸಿ, ಸ್ವಲ್ಪ ಭಾಗವನ್ನು ಬೇಯಿಸಿ ಮತ್ತು ಸಾಂಬಾರ್‌ ಪದಾರ್ಥ ತಯಾರಿಸಿ ಇಡಲಾಗಿತ್ತು. ಉಳಿದ ಕಳೆಬರಹವನ್ನು ಮಣ್ಣಿನಲ್ಲಿ ಹೂತು ಹಾಕಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Forest-Department-officials-arrest-three-Persons-at-Navagalli-in-Sagara-Taluk.

ಘಟನೆ ಸಂಬಂಧ ಬಾನು, ಶಿವು ಹಾಗೂ ಮಹೇಶ ಎಂಬುವವರನ್ನು ಬಂಧಿಸಲಾಗಿದೆ. ಷಾಜಿ, ರಾಮ ಮತ್ತು ಶ್ರೀಧರ ಎಂಬುವವರು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿವಮೊಗ್ಗದ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ, ಕಾರ್ಗಲ್‌ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗುರುರಾಜ .ಸಿ.ಬಿ ಮತ್ತು ಶರಾವತಿ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಧನಂಜಯ ನಾಯ್ಕ  ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಉಪ ವಲಯ ಅರಣ್ಯಾಧಿಕಾರಿ ಗುರುರಾಜ ತೋಳಬಂದಿ, ಕಿರಣ ಎ.ಬಿದರಳ್ಳಿ, ಸಂಧ್ಯಾ. ಎಸ್, ಗಸ್ತು ಅರಣ್ಯ ಪಾಲಕ ದೀಪಕ. ಎಸ್. ಪ್ರಭು ಸೇರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ