ವಡ್ಡಿನಕೊಪ್ಪದ ಮನೆಯ ಬೀರುವಿನಲ್ಲಿದ್ದ ಲಕ್ಷ ಲಕ್ಷದ ಚಿನ್ನಾಭರಣ ದಿಢೀರ್‌ ನಾಪತ್ತೆ

ಶಿವಮೊಗ್ಗ: ಮನೆಯ ಬೀರುವಿನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದ್ದು, ಸಂಬಂಧಿಯೊಬ್ಬರ ವಿರುದ್ಧವೇ ಅನುಮಾನವಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.  

ಶಿವಮೊಗ್ಗದ ವಡ್ಡಿನಕೊಪ್ಪದ ತಮಿಳು ಕ್ಯಾಂಪ್‌ ನಿವಾಸಿ ವಿಜಯಾ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ವಿಜಯಾ ಅವರು ಮಗ, ಸೊಸೆ ಹಾಗೂ ಮೊಮ್ಮಗಳ ಜತೆಗೆ ವಾಸವಾಗಿದ್ದಾರೆ. ತಮ್ಮ ಮನೆಯ ಹಾಲ್‌ನಲ್ಲಿರುವ ಬೀರುವಿನ ಲಾಕರ್‌ನಲ್ಲಿ ಚಿನ್ನಾಭರಣ ಇಟ್ಟು ಲಾಕ್‌ ಮಾಡಲಾಗಿತ್ತು. ಈಚೆಗೆ ಬೀರು ತೆಗೆದಾಗ ಒಡವೆಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Voddinakoppa-in-Shivamogga-Taluk

ಏನೇನೆಲ್ಲ ಕಳ್ಳತನವಾಗಿವೆ?

ಬೀರುವಿನಲ್ಲಿದ್ದ 32 ಗ್ರಾಂ ತೂಕದ ₹2,56,000 ಮೌಲ್ಯದ ಚೈನ್, 10 ಗ್ರಾಂ ತೂಕದ ₹80,000 ಮೌಲ್ಯದ ಮತ್ತೊಂದು ಚೈನ್, 8 ಗ್ರಾಂ ತೂಕದ ₹64,000 ಮೌಲ್ಯದ ಮತ್ತೊಂದು ಚೈನ್, 4 ಗ್ರಾಂ ತೂಕದ ₹32,000 ಮೌಲ್ಯದ ಎರಡು ಬಂಗಾರದ ಉಂಗುರಗಳು, 4 ಗ್ರಾಂ ತೂಕದ ₹32,000 ಮೌಲ್ಯದ ಒಂದು ಜೋಡಿ ಬಂಗಾರದ ಬೆಂಡೋಲೆ ಕಳುವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟು ₹4,64,000 ಮೌಲ್ಯದ 58 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿವೆ. ವಿಜಯಾ ಅವರ ಸಂಬಂಧಿ ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಅವರೆ ಕೃತ್ಯ ಎಸಗಿರಬಹುದು ಎಂದು ಅನುಮಾನದ ಮೇರೆಗೆ ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ