ಶಿವಮೊಗ್ಗ ಲೈವ್
ಗೋವಾ: ಮೊಬೈಲ್ ಹಾಗೂ ವಾಚ್ ಕಳ್ಳತನ ಪ್ರಕರಣ ಸಂಬಂಧ ಶಿವಮೊಗ್ಗದ ಇಬ್ಬರನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಗೋವಾದ ಕಲಂಗುಟೆ ಪ್ರದೇಶದ ಹಾಲಿಡೇ ವಿಲ್ಲಾ ಒಂದರಲ್ಲಿ ಘಟನೆ ನಡೆದಿತ್ತು. (ಈ ಸುದ್ದಿಯನ್ನು ಇನ್ನು 22 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿವಮೊಗ್ಗ ಮೂಲದ ಕಿರಣ್ ಮತ್ತು ಅರುಣ್ ಎಂಬುವರನ್ನು ಗೋವಾ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಆರೋಪಿಗಳು ವಿಲ್ಲಾದ ಹಿಂಬಾಗಿಲಿನ ಮೂಲಕ ಒಳನುಗ್ಗಿದ್ದರು. ₹90,000 ಮೌಲ್ಯದ ಮೊಬೈಲ್ ಫೋನ್ ಹಾಗೂ ಎರಡು ವಾಚ್ಗಳನ್ನು ದೋಚಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಗೋವಾದ ಕಲಂಗುಟೆ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.
