ಕೃಷಿ ಕಾಲೇಜು ಎದುರು ಖಾಸಗಿ ಬಸ್‌ ಡಿಕ್ಕಿ, ಪಾದಚಾರಿ ಸಾವು

ಶಿವಮೊಗ್ಗ: ನಗರದ ಕೃಷಿ ಕಾಲೇಜು ಎದುರು ಖಾಸಗಿ ಬಸ್‌ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಮಿನಕೊಪ್ಪ ನಿವಾಸಿ ಆನಂದಪ್ಪ (48) ಮೃತರು.

ಶುಕ್ರವಾರ ರಾತ್ರಿ ಕೃಷಿ ಕಾಲೇಜು ಎದುರಿನ ಚನ್ನಮುಂಭಾಪುರದಲ್ಲಿರುವ ಪತ್ನಿ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಶಿವಮೊಗ್ಗದಿಂದ ಆನವಟ್ಟಿ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಮೃತ ಆನಂದಪ್ಪ ಅವರಿಗೆ ಪತ್ನಿ, ಪತ್ರಕರ್ತ ರಾಕೇಶ್ ಸೇರಿ ಇಬ್ಬರು ಮಕ್ಕಳಿದ್ದಾರೆ. ಶಿವಮೊಗ್ಗ ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Fatal-Accident-in-front-of-Agriculture-University-in-Shimoga-Navule

Bhovi Samaja Prathiba Puraskara

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ