ಮಾಸ್ತಿಕಟ್ಟೆ ಸಮೀಪ ಅಪಘಾತ, ಅದೃಷ್ಟವಶಾತ್‌ ತಪ್ಪಿದ ಅನಾಹುತ, ಹೇಗಾಯ್ತು?

ಹೊಸನಗರ: ದಿಢೀರ್‌ ರಸ್ತೆಗೆ ಬಂದ ಕಾಡು ಪ್ರಾಣಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರೊಂದು ವಿದ್ಯತ್‌ ಕಂಬಕ್ಕೆ ಗುದ್ದಿದೆ. ಘಟನೆಯಲ್ಲಿ ವಿದ್ಯುತ್‌ ಕಂಬ ಮುರಿದು ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್‌ ಕಾರಿನಲ್ಲಿದ್ದವರು ಪರಾಗಿದ್ದಾರೆ.

ನಗರದ ಮಾಸ್ತಿಕಟ್ಟೆ ಮಾರ್ಗದ ನೂಲಿಗ್ಗೇರಿಯಲ್ಲಿ ಇಂದು ಬೆಳಿಗ್ಗೆ ಘಟನೆ ನಡೆದಿದೆ. ಸಾಗರದ ಪ್ರಕಾಶ್‌ ಎಂಬುವವರು ಮಣಿಪಾಲ್‌ನಿಂದ ಸಾಗರ ಕಡೆ ತೆರಳುತ್ತಿದ್ದರು. ಈ ಸಂದರ್ಭ ಕಡಾವೊಂದು ಕಾರಿಗೆ ಅಡ್ಡಬಂದಾಗ ಘಟನೆ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಮುರಿದ ವಿದ್ಯುತ್ ಕಂಬ ನೇರವಾಗಿ ಕಾರಿನ ಮೇಲೆ ಬಿದ್ದಿದೆ.

Electric-Pole-Falls-on-car-near-Mastikatte-in-Hosanagara

ಅಪಘಾತದ ಸಂದರ್ಭ ಕಾರಿನಲ್ಲಿದ್ದ ಪ್ರಕಾಶ್ ಮತ್ತು ಮೂರು ಮಕ್ಕಳು ಸೇರಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆ ನಗರ ಠಾಣೆ ಪಿಎಸ್‌ಐ ಶಿವಾನಂದ ಕೋಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಫೋಟೊ, ಮಾಹಿತಿ ಕೃಪೆ: Good Morning Karntaka

Bhovi Samaja Prathiba Puraskara

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ