24,500 ಕೆ.ಜಿ ಅಡಿಕೆ ಕೊಂಡೊಯ್ದ ಲಾರಿ ಮಿಸ್ಸಿಂಗ್‌, ಚಾಲಕನ ಮೊಬೈಲ್‌ ಆಫ್‌, ಜಿಪಿಎಸ್‌ ಕಟ್

ಶಿವಮೊಗ್ಗ: ನಗರದ ಎಪಿಎಂಸಿ ಯಾರ್ಡ್‌ನಿಂದ ಗುಜರಾತ್‌ಗೆ ಅಡಿಕೆ ಕೊಂಡೊಯ್ದ ಲಾರಿ ನಾಪತ್ತೆಯಾಗಿದೆ. ಚಾಲಕನ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಲಾರಿಯ ಜಿಪಿಎಸ್‌ ಸಂಪರ್ಕವು ಕಡಿತವಾಗಿದೆ ಎಂದು ಆರೋಪಿಸಲಾಗಿದೆ.

ಆಗಸ್ಟ್‌ 7ರಂದು ಎಪಿಎಂಸಿಯ ಮಂಡಿಯಿಂದ ಅಂದಾಜು ₹77,17,500 ಮೌಲ್ಯದ 24,500 ಕೆ.ಜಿ ತೂಕದ 350 ಅಡಿಕೆ ಚೀಲಗಳನ್ನು ಲಾರಿಗೆ ಲೋಡ್‌ ಮಾಡಲಾಗಿತ್ತು. ಚಾಲಕ ಅಲ್ಲಾಭಕ್ಷಿ ಎಂಬಾತ ಲಾರಿಯನ್ನು ಶಿವಮೊಗ್ಗದಿಂದ ಗುಜರಾತ್‌ ರಾಜ್ಯದ ಅಹಮದಾಬಾದ್‌ಗೆ ಕೊಂಡೊಯ್ದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

Shivamogga-APMC-Market

ಮಾರ್ಗ ಮಧ್ಯೆ ಚಾಲಕನ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. ಲಾರಿಯ ಜಿಪಿಎಸ್‌ ಸಂಪರ್ಕವು ಕಡಿತವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಲಾರಿ ಮಾಲೀಕ ದೂರು ನೀಡಿದ್ದು, ₹77,17,500 ಲಕ್ಷ ಅಡಿಕೆ, ₹21 ಲಕ್ಷ ಮೌಲ್ಯದ ಲಾರಿ ಸೇರಿ ಒಟ್ಟು ₹98.17 ಮೌಲ್ಯದ ವಸ್ತು ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಚಾಲಕ ಸಂಪರ್ಕಕ್ಕೆ ಸಿಗಬಹುದು ಎಂದು ಕಾದಿದ್ದ ಮಾಲೀಕರು ತಡವಾಗಿ ದೂರು ನೀಡಿದ್ದಾರೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.