ಶಿವಮೊಗ್ಗ ಸಿಟಿಯ ಪ್ರಮುಖ ಬೀದಿಗಳಲ್ಲಿ ಪೊಲೀಸ್‌, ಎಸ್‌ಎಎಫ್‌ ಪಥ ಸಂಚಲನ

ಶಿವಮೊಗ್ಗ: ಗಣೇಶ ಚತುರ್ಥಿ ಅಂಗವಾಗಿ ನಗರದ ವಿವಿಧೆಡೆ ಪೊಲೀಸ್‌ ಇಲಾಖೆ ವತಿಯಿಂದ ರೂಟ್‌ ಮಾರ್ಚ್‌ ನಡೆಸಲಾಯಿತು. ಮಂಗಳವಾರ ದೊಡ್ಡಪೇಟೆ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಯಿತು.

ದೊಡ್ಡಪೇಟೆ ಠಾಣೆ ವ್ಯಾಪ್ತಿಯ ಪ್ರಮುಖ ಬೀದಿಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಸಾಗಿತು. ಇನ್ನು, ಠಾಣೆ ಪೊಲೀಸ್‌ ಸಿಬ್ಬಂದಿ, ಎಸ್‌ಎಎಫ್‌ ತುಕಡಿ ಪಥ ಸಂಚಲನದಲ್ಲಿ ಭಾಗವಹಿಸಿತ್ತು. ಕಾನೂನು ಸುವ್ಯವಸ್ಥೆ ಕಾಪಾಡಲು ನಗರದ ವಿವಿಧೆಡೆ ಆಯಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಪಥ ಸಂಚಲನ ನಡೆಸಲಾಗುತ್ತಿದೆ.

Route-March-by-Shivamogga-Doddapete-Police-Station

ಇನ್ನು, ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ ವೇಳೆ ಚೀತಾ ವಾಹನಗಳ ಬೀಟ್‌ ಹೆಚ್ಚಳ ಮಾಡಲಾಗಿದೆ. ನಗರದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಮತ್ತಷ್ಟು ಬಿಗಿಗೊಳಿಸಲಾಗಿದೆ.