ತೀರ್ಥಹಳ್ಳಿಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ ಶಂಕೆ, ದಾಖಲಾಯ್ತು ಕೇಸ್‌

ತೀರ್ಥಹಳ್ಳಿ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸೊಪ್ಪುಗುಡ್ಡೆಯ ಗೋದಾಮಿನಿಂದ ಅನಧಿಕೃತ ವಾಹನದಲ್ಲಿ ಅನ್ನಭಾಗ್ಯ ಅಕ್ಕಿ ಸಾಗಾಟಕ್ಕೆ ಯತ್ನಿಸಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

320 ಚೀಲಗಳಲ್ಲಿ 178 ಕ್ವಿಂಟಲ್‌ ಅಕ್ಕಿಯನ್ನು ಸಾಗಣೆ ಮಾಡಲು ಪ್ರಯತ್ನಿಸಲಾಗಿದೆ.  ಆಹಾರ ನಿರೀಕ್ಷಕ ಶಶಿಧರ ಎಸ್.‌ ದೂರಿನ ಆಧಾರದ ಮೇಲೆ ಗೋದಾಮು ಉಸ್ತುವಾರಿ ಹಿರಿಯ ಸಹಾಯಕ ಶ್ರೇಣಿ ಮಾರುತಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.

Annabhagya-Rice-Bag-Theft-suspect

ಪಡಿತರ ಅಕ್ಕಿ ಸಾಗಿಸಲು ಲಾರಿಗಳಿಗೆ ಪರವಾನಗಿ ಇರಬೇಕು. ಗೋದಾಮಿನಿಂದ ತಾಲ್ಲೂಕಿನ ಸಗಟು ಗೋದಾಮು, ನ್ಯಾಯಬೆಲೆ ಅಂಗಡಿಗಳಿಗೆ ಸಾಗಿಸುವಾಗ ಅನುಮತಿ ಇರಬೇಕು. ಅಲ್ಲದೆ ಆಯುಕ್ತರ ಕಚೇರಿಯಿಂದ ಟೆಂಡರ್‌ ಮೂಲಕ ನೀಡಲಾದ ಅಧಿಕೃತ ಸಾಗಾಣಿಕೆ ವಾಹನಗಳಲ್ಲಿಯೇ ದಾಸ್ತಾನು ಮಾಡಬೇಕೆಂಬ ನಿಯಮಗಳಿವೆ. ಗೋದಾಮು ಉಸ್ತುವಾರಿ ಅವುಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.