ಶಿವಮೊಗ್ಗ ಲೈವ್
ಶಿವಮೊಗ್ಗ: ಆಸ್ಪತ್ರೆ ಎದುರು ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಪುರದಳು ನಿವಾಸಿ ಬೈರು ಎಂಬುವರಿಗೆ ಸೇರಿದ ಹೀರೊ ಹೆಚ್.ಎಫ್ ಡಿಲಕ್ಸ್ ನಾಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.
ನಗರದ ಬಿ.ಹೆಚ್. ರಸ್ತೆಯ ಗಂಗಾ ಆಸ್ಪತ್ರೆ ಮುಂಭಾಗ ಬೈಕ್ ನಿಲ್ಲಿಸಿ ಬೈರು ಅವರು ಆಸ್ಪತ್ರೆ ಒಳಗೆ ಹೋಗಿದ್ದ ಸಂದರ್ಭ ಘಟನೆ ನಡೆದಿದೆ. ಬೆಳಿಗ್ಗೆ 9:30ಕ್ಕೆ ಬೈಕ್ ನಿಲ್ಲಿಸಿದ್ದರು. ಮಧ್ಯಾಹ್ನ 12 ಗಂಟೆಗೆ ಹೊತ್ತಿಗೆ ವಾಪಸ್ ಬಂದು ನೋಡಿದಾಗ ಬೈಕ್ ಇರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
