ಶಿವಮೊಗ್ಗ ಲೈವ್
ಶಿವಮೊಗ್ಗ: ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆ ಮೆಡಲ್, ಶೌರ್ಯ ಪ್ರಶಸ್ತಿ ಪುರಸ್ಕೃತರಿಗೆ ಭಾರತೀಯ ರೈಲ್ವೆ ಪ್ರಾಧಿಕಾರವು ರೈಲು ಉಚಿತ ಸೇವೆಯನ್ನು ಪರಿಚಯಿಸಿದೆ.
ಸೆ.15 ರಿಂದ ಆನ್‌ಲೈನ್ ಪಾಸ್‌ಗಾಗಿ https://irccp.indianrail.gov.in/IRCCP ಜಾಲತಾಣದಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ನ.1 ರಿಂದ ಐಆರ್‌ಸಿಟಿಸಿ ಪೋರ್ಟಲ್‌ನಲ್ಲಿ ಉಚಿತ ಪ್ರಯಾಣದ ಟಿಕೆಟ್ ಸೃಜಿಸಬಹುದಾಗಿದೆ. ಈ ಸೇವೆಯು ಶೌರ್ಯ ಪ್ರಶಸ್ತಿ ಪುರಸ್ಕೃತರು ಮತ್ತು ಅವರೊಂದಿಗೆ ಒಬ್ಬ ಸಂಗಾತಿಗೆ ಅನ್ವಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-220925 ಸಂಪರ್ಕಿಸಬಹುದು ಎಂದು ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ ಸಿ.ಎ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
