ಶಿವಮೊಗ್ಗ ಲೈವ್
ಶಿವಮೊಗ್ಗ: ನಗರದ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ರೋಗಿಗಳಿಗೆ ಅ.5ರಿಂದ 10ರವರೆಗೆ ಒಂದು ವಾರ ಉಚಿತ ನೋಂದಣಿ ಮತ್ತು ತಜ್ಞ ವೈದ್ಯರ ಸಮಾಲೋಚನೆಗೆ ಅವಕಾಶ ಕಲ್ಪಿಸಲಾಗಿದೆ. ಸ್ತನದಲ್ಲಿ ಗಡ್ಡೆ, ಗಂಟು ಅಥವಾ ನೋವು, ತೊಟ್ಟಿನಲ್ಲಿ ರಕ್ತಸ್ರಾವ ಅಥವಾ ಯಾವುದೇ ಅಸಹಜ ಬದಲಾವಣೆಗಳ ಬಗ್ಗೆ ನಿರ್ಲಕ್ಷ್ಯ ಮಾಡದೆ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವೈದ್ಯರು ಸೂಚಿಸುವ ಎಲ್ಲಾ ರೀತಿಯ ಪರೀಕ್ಷೆಗಳ ಮೇಲೆ ಶೇ.20ರಷ್ಟು ರಿಯಾಯಿತಿ ನೀಡಲಾಗುವುದು. ಉಚಿತ ಸಮಾಲೋಚನೆಗಾಗಿ ಮೊಬೈಲ್ ಸಂಖ್ಯೆ 9686698099, 8971667117ಗೆ ಸಂಪರ್ಕಿಸಬಹುದು.
