ಮಾಸಿಕ ಗೌರವಧನಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ, ಯಾರೆಲ್ಲ ಸಲ್ಲಿಸಬಹುದು?

ಶಿವಮೊಗ್ಗ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2026-27ನೇ ಸಾಲಿಗೆ ಜೈನ್ ಅರ್ಚಕರು, ಬೌದ್ಧ ಧಮ್ಮಚಾರಿಗಳು ಮತ್ತು ಸಿಖ್ ಗ್ರಂಥಿಗಳಿಗೆ ಮಾಸಿಕ ಗೌರವಧನ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. (ಈ ಸುದ್ದಿಯನ್ನು ಇನ್ನು 46 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಅರ್ಹ ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿಯಿಂದ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ಬಸದಿ ನೋಂದಣಿ ಪ್ರತಿ, ಆಡಳಿತ ಮಂಡಳಿ ಪ್ರತಿ, ಅರ್ಚಕರ ಭಾವಚಿತ್ರ, ವಾಸಸ್ಥಳ ದೃಢೀಕರಣ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್ ಪ್ರತಿ, ಮಾಹೆವಾರು ಕರ್ತವ್ಯ ನಿರ್ವಹಿಸಿದ ಹಾಜರಾತಿ, ಸೇವಾ ದೃಢೀಕರಣ ಪತ್ರ, ಧಾರ್ಮಿಕ ವಿದ್ಯಾರ್ಹತೆ ದಾಖಲೆ, ರೇಷನ್ ಕಾರ್ಡ್ ಪ್ರತಿ ಹಾಗೂ ₹100 ಮೊತ್ತದ ಛಾಪಾ ಕಾಗದದಲ್ಲಿ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಸಲ್ಲಿಸಬೇಕಾಗಿದೆ.

SHIMOGA-NEWS-UPDATE

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿ, 1ನೇ ಮಹಡಿ, ಸತ್ಯಶ್ರೀ ಆರ್ಕೆಡ್, 5ನೇ ಪ್ಯಾರಲಲ್ ರಸ್ತೆ, ದುರ್ಗಿಗುಡಿ, ಶಿವಮೊಗ್ಗ. ದೂರವಾಣಿ ಸಂಖ್ಯೆ: 08182-220206 ಹಾಗೂ ಜಿಲ್ಲಾ ಮಾಹಿತಿ ಕೇಂದ್ರದ ಮೊಬೈಲ್ ಸಂಖ್ಯೆ: 7676888388 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.